ಮಂಗಳೂರಿನ ಹಂಪನಕಟ್ಟೆಯ ಜ್ಯುವೆಲರಿ ಶಾಪ್‌ಗೆ ನು#ಗ್ಗಿ ವ್ಯಕ್ತಿಗೆ ಚೂ#ರಿ ಇರಿದು ಹ#ತ್ಯೆ; ಸಿಸಿ ಕ್ಯಾಮರಾದಲ್ಲಿ ದಾಖಲು
Friday, February 3, 2023
ಮಂಗಳೂರು(Headlines Kannada): ಬೈಕ್ನಲ್ಲಿ ಬಂದ ದುರ್ಷರ್ಮಿಗಳು ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ವ್ಯಕ್ತಿಗೆ ಚೂ#ರಿ ಇರಿದು ಹ#ತ್ಯೆ ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ಮಂಗಳೂರಿನ ಹಂಪನಕಟ್ಟೆಯಲ್ಲಿ ನಡೆದಿದೆ.
ಮಂಗಳೂರಿನ ಹಂಪನಕಟ್ಟದಲ್ಲಿರುವ ಜ್ಯುವೆಲರಿ ಶಾಪ್‌ನಲ್ಲಿ ಕೆಲಸಕ್ಕಿದ್ದ ರಾಘವ(50) ಕೊ#ಲೆಯಾದ ವ್ಯಕ್ತಿ. ಬೈಕೊಂದರಲ್ಲಿ ಬಂದ ಇಬ್ಬರು ಮುಸುಕುದಾರಿ ದುಷ್ಕರ್ಮಿಗಳು ಜ್ಯುವೆಲರಿ ಶಾಪ್‌ಗೆ ನುಗ್ಗಿ ರಾಘವಗೆ ಚಾ#ಕುವಿನಿಂದ ಇ#ರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ವೇಳೆ ಚಾ#ಕು ಇ#ರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ರಾಘವ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಸಾ#ವನ್ನಪ್ಪಿದ್ದಾರೆ. ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶುಕ್ರವಾರ ಸಂಜೆ ಈ ಕೃತ್ಯ ನಡೆದಿದ್ದು, ಈ ಕೊ#ಲೆ ಕೃತ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೊ#ಲೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ತನಿಖೆಯನ್ನು ತೀವ್ರ ಗೊಳಿಸಿದ್ದಾರೆ.