
ದೇವಸ್ಥಾನದ ಹಣಕದ್ದ ಆರೋಪ; ಬೀದಿಬದಿ ವ್ಯಾಪಾರಿಯೊಬ್ಬನನ್ನು ಥ#ಳಿಸಿ ಕೊಂ#ದ ಗುಂಪು: ನಾಲ್ವರ ವಿರುದ್ಧ ಪ್ರಕರಣ ದಾಖಲು
ಪೋರಬಂದರ್(Headlines Kannada): ದೇವಸ್ಥಾನದ ಹಣಕದ್ದ ಆರೋಪದ ಮೇರೆಗೆ ಬೀದಿಬದಿ ವ್ಯಾಪಾರಿಯೊಬ್ಬನನ್ನು ಗುಂಪೊಂದು ಥ#ಳಿಸಿ ಹ#ತ್ಯೆ ಮಾಡಿರುವ ಘಟನೆ ಗುಜರಾತಿನ ಪೋರಬಂದರ್ ನಗರದ ಬೋಖಿರಾ ಪ್ರದೇಶದಲ್ಲಿ ನಡೆದಿದೆ.
ಶ್ಯಾಮ್ ಎಂಬ 26 ವರ್ಷದ ಬೀದಿಬದಿ ವ್ಯಾಪಾರಿಯೊಬ್ಬನನ್ನು ದೇವಸ್ಥಾನದ ಹಣಕದ್ದ ಆರೋಪದ ಮೇರೆಗೆ ಗುರುವಾರ ರಾತ್ರಿ ಗುಂಪು ಹ#ತ್ಯೆ ಮಾಡಿದೆ. ಹ#ತ್ಯೆಯ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹ#ತ್ಯೆಯಾದ ಶ್ಯಾಮ್'ನ ತಂದೆ ಕಿಶೋರ್ ಬಥಿಯಾ ಮಾತನಾಡಿ, 'ನನ್ನ ಮಗ ಶ್ಯಾಮ್ ಬೀದಿಬದಿ ವ್ಯಾಪಾರಿಯಾಗಿ ಕೆಲಸ ಮಾಡಿಕೊಂಡಿದ್ದು, ಸೈಕಲ್‌ನಲ್ಲಿ ಹೋಗಿ ಆ್ಯಸಿಡ್ ಮತ್ತು ಫಿನೈಲ್ ಮಾರಾಟ ಮಾಡುತ್ತಿದ್ದನು. ಬೋಖಿರಾ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಾಗ ವಚಾರ್ಡಾ ದಾದಾ ದೇವಸ್ಥಾನದ ಟ್ರಸ್ಟಿಗಳಾದ ಎಭಾಲ್ ಕಡ್ಚಾ, ಲಾಖಾ ಭೋಗೇಶ್ರಾ, ರಾಜು ಬೋಖಿರಿಯಾ ಮತ್ತು ಇತರರು ಶ್ಯಾಮ್'ನನ್ನು ತಡೆದು ಥ#ಳಿಸಿದ್ದಾರೆ.
ವಾಚರ್ಡಾ ದಾದಾ ದೇವಸ್ಥಾನದಲ್ಲಿ ಹಣ ಕದ್ದಿದ್ದು, ತಾನೇ ಎಂದು ಒಪ್ಪಿಕೊಳ್ಳುವಂತೆ ಹೇಳಿ ಥ#ಳಿಸಿದ್ದಾರೆ. ಬಳಿಕ ಆರೋಪಿಗಳು ಶ್ಯಾಮ್'ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಜೆ ಪೊಲೀಸ್ ಕಸ್ಟಡಿಯಲ್ಲಿ ಶ್ಯಾಮ್ ಮೃ#ತಪಟ್ಟಿದ್ದಾನೆ ಎಂದು ಆರೋಪ ಮಾಡಿದ್ದಾರೆ.