ಕಾಂಗ್ರೆಸ್ಸನ್ನು ಟೀಕಿಸಲು ಹೋಗಿ ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದ ನಳೀನ್ ಕುಮಾರ್ ಕಟೀಲ್
Sunday, February 19, 2023
ಮಡಿಕೇರಿ: 'ಕಿವಿ ಮೇಲೆ ಹೂ' ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ಸನ್ನು ಟೀಕಿಸುವ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ 'ಭಾರತವನ್ನು ಭಿಕ್ಷುಕ ರಾಷ್ಟ್ರ' ಎಂದು ಹೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಮಡಿಕೇರಿಯ ವಿರಾಜಪೇಟೆಯಲ್ಲಿ ಕೊಡವ ಭಾಷಿಕರ ಸಮ್ಮೇಳನದಲ್ಲಿ ಮಾತನಾಡಿದ ಕಟೀಲ್, ದೇಶಾಹದಲ್ಲಿ ಕಾಂಗ್ರೆಸ್ ಒಳ್ಳೆಯ ಆಡಳಿತ ಮಾಡಿದ್ದರೆ ಭಾರತ ಭಿಕ್ಷುಕರ, ಸಾಲಗಾರರ ರಾಷ್ಟ್ರ ಆಗುತ್ತಿರಲಿಲ್ಲ. ಇಡೀ ದೇಶದ ಜನರ ಕಿವಿಗೆ ಹೂ ಇಟ್ಟು ಬದುಕಿದ ಕಾಂಗ್ರೆಸ್, ಸ್ವಾತಂತ್ರ್ಯ ನಂತರವೂ ಅದನ್ನೇ ಮಾಡಿದೆ. ರಾಜ್ಯ ಹಾಗು ದೇಶದಲ್ಲಿ ಬಿಜೆಪಿಯ ಒಳ್ಳೆ ಕೆಲಸ ಸಹಿಸಲಾಗದೆ ಕಾಂಗ್ರೆಸ್‍ನವರು ಹೂ ಇಟ್ಟುಕೊಂಡಿದ್ದರು, ಮುಂದೆ ಹೂ ಇಟ್ಟುಕೊಂಡೇ ಬದುಕಬೇಕು ಎಂದು ವ್ಯಂಗ್ಯವಾಡಿದರು.
ಇನ್ನು ಮುಂದೆ ಕಾಂಗ್ರೆಸಿಗರು ಶಾಶ್ವತವಾಗಿ ಹೂ ಇಟ್ಟುಕೊಳ್ಳುವ ಕೆಲಸ ಮಾಡಬೇಕು. ನಾವು ಜನರ ಪರವಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿಯೂ ಗೆಲುವು ನಮ್ಮದೇ ಎಂದರು.