ರೂಪಾ ವಿರುದ್ಧ ತಿರುಗೇಟು ನೀಡಿದ ರೋಹಿಣಿ ಸಿಂಧೂರಿ; ಕಾನೂನು ಹೋರಾಟದ ಎಚ್ಚರಿಕೆ !

ರೂಪಾ ವಿರುದ್ಧ ತಿರುಗೇಟು ನೀಡಿದ ರೋಹಿಣಿ ಸಿಂಧೂರಿ; ಕಾನೂನು ಹೋರಾಟದ ಎಚ್ಚರಿಕೆ !

ಬೆಂಗಳೂರು: IAS ರೋಹಿಣಿ ಸಿಂಧೂರಿ ಹಾಗು IPS ರೂಪಾ ಮೌದ್ಗಿಲ್ ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಯಿದ್ದು, ತನ್ನ ವಿರುದ್ಧ ಆರೋಪ ಹಾಗು ಖಾ#ಸಗಿ ಫೋಟೋಟಗಳನ್ನು ಶೇರ್ ಮಾಡಿದ ರೂಪಾ ಅವರ ವಿರುದ್ಧ ರೋಹಿಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ವಿರುದ್ಧ ಮಾಡಿರುವ ವೈಯಕ್ತಿಕ ನಿಂದನೆ ಹಾಗೂ ತೇಜೋವಧೆ ವಿರುದ್ಧ ಐಪಿಎಸ್ ಸೆಕ್ಷನ್ ಗಳಡಿ ರೂಪಾ ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಡಿ.ರೂಪಾ ಅವರು ತಮ್ಮ ಕೆಲ ಖಾಸಗಿ ಫೋಟೋಗಳನ್ನು ಶೇರ್ ಮಾಡಿ, ಕೆಲವು ಆರೋಪಗಳನ್ನು ಮಾಡಿದ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ,  ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿದ್ದ ಫೋಟೋಗಳನ್ನು ಬಳಸಿ ನಿಂದನೆ ಹಾಗೂ ತೇಜೋವಧೆ ಮಾಡಿದ್ದು, ತಾನು ಯಾವ ಅಧಿಕಾರಿಗೆ ಫೋಟೋಸ್ ಕಳುಹಿಸಿದ್ದೆ ಅಂತ ಹೆಸರು ಬಹಿರಂಗಪಡಿಸಬೇಕು ಎಂದು ರೂಪಾರಿಗೆ ಸವಾಲು ಹಾಕಿದ್ದಾರೆ. 

ತನ್ನ ವಿರುದ್ಧ ಆರೋಪ ಮಾಡಿರುವ ಡಿ.ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಆಧಾರರಹಿತ ಆರೋಪ ಮಾಡಿ ವೈಯಕ್ತಿಕ ನಿಂದನೆ, ತೇಜೋವಧೆ ವಿರುದ್ಧ IPS ಸೆಕ್ಷನ್ ಗಳಡಿ ಕಾನೂನು ಕ್ರಮಕ್ಕಾಗಿ ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸುವುದಾಗಿ ಸಿಂಧೂರಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article