ಪ್ರಧಾನಿ ಮೋದಿ ವಿದೇಶಕ್ಕೆ ಹೋದಾಗಲೆಲ್ಲಾ ಅದಾನಿಗೆ ಗಿಫ್ಟ್ ಕೊಡುತ್ತಾರೆ: ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
Thursday, February 23, 2023
ಶಿಲ್ಲಾಂಗ್: ಪ್ರಧಾನಿ ಮೋದಿ ವಿದೇಶಕ್ಕೆ ಹೋದಾಗಲೆಲ್ಲಾ ಅದಾನಿಗೆ ಗಿಫ್ಟ್ ಕೊಡುತ್ತಾರೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರಕಾರ ಹಾಗು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ ಸೇರಿದಂತೆ ಯಾವ ದೇಶಕ್ಕೆ ಹೋದರೂ ಅದಾನಿಗೆ ಗಿಫ್ಟ್ ನೀಡುತ್ತಲೇ ಬಂದಿದ್ದಾರೆ ಎಂದು ಹೇಳುವ ಮೂಲಕ ಆ ರಾಷ್ಟ್ರಗಳಲ್ಲಿನ ಬಂದರುಗಳಿಂದ ಹಿಡಿದು ಇಂಧನ ವಲಯದಲ್ಲಿನ ಗುತ್ತಿಗೆ ವಿಚಾರವನ್ನು ಈ ವೇಳೆ ಉಲ್ಲೇಖಿಸಿದರು.
ಅದಾನಿ ವ್ಯವಹಾರ ಇಂದು ಸಲೀಸಾಗಿ ನಡೆಯಲಿಕ್ಕೆ ಮೋದಿಯೇ ಕಾರಣ. ಪ್ರಧಾನಿಯ ಆಪ್ತರಾಗಿರುವುದರಿಂದಲೇ ಅದಾನಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಈ ವಿಷಯವನ್ನು ಲೋಕಸಭೆಯಲ್ಲಿ ಹೇಳಿದ್ದರೂ ಟಿವಿ ಚಾನೆಲ್ ಗಳು ಮತ್ತು ಪತ್ರಿಕೆಗಳು ವರದಿ ಮಾಡಿಲ್ಲ. ಕಾರಣ ಮಾಧ್ಯಮಗಳು ಇಂದು ಪ್ರಧಾನಿಯ ಪ್ರಬಲ ಮತ್ತು ಆಪ್ತ ಸಹಾಯಕರ ಕೈಯಲ್ಲಿವೆ ಎಂದು ಆರೋಪಿಸಿದರು.