ಫಹಾದ್ ಜೊತೆ ಅಂತರಧರ್ಮೀಯ ಮದುವೆಯಾದ ನಟಿ ಸ್ವರಾ ಭಾಸ್ಕರ್ ಬಗ್ಗೆ ಕೆಂಡಕಾರಿದವರಿಗೆ, ಟೀಕಿಸಿದವರಿಗೆ ಕೊಟ್ಟ ತಿರುಗೇಟು ನೋಡಿ...
ಮುಂಬೈ: ಕೆಲವು ದಿನಗಲ್ಲ ಹಿಂದೆ ಫಹಾದ್ ಅಹ್ಮದ್ ಜೊತೆ ಅಂತರಧರ್ಮೀಯ ಮದುವೆಯಾದ ಖ್ಯಾತ ನಟಿ ಸ್ವರಾ ಭಾಸ್ಕರ್ ಬಗ್ಗೆ ಸಂಘಪರಿವಾರದವರು ಟೀಕೆ ಮಾಡಿದ್ದು, ಇನ್ನು ಕೆಲವು ನೆಟ್ಟಿಗರು ಟ್ರೋಲ್ ಮಾಡಿದ್ದರು. ಇದಕ್ಕೆ ಸ್ವರಾ ಭಾಸ್ಕರ್ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಮುಂಬೈನ ಶ್ರದ್ಧಾ ವಾಕರ್ ಹ#ತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹ#ತ್ಯೆಯಾಗಬಹುದು ಎಂದು ಸಾಧ್ವಿ ಪ್ರಾಚೀ ಸಿಂಗ್ ಹೇಳಿದ್ದಾರೆ, ಇನ್ನೂ ಕೆಲವರು ಮುಸ್ಲಿಂ ಯುವಕನನ್ನು ಮದುವೆಯಾದ ಕಾರಣಕ್ಕೆ ಟೀಕೆ ಮಾಡಿದ್ದರು.
ಈಗ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಅವರು ತಿರುಗೇಟು ನೀಡಿದ್ದಾರೆ. ತಮ್ಮ ನಗುವಿನ ಮೂಲಕವೇ ಅವರು ಎಲ್ಲ ಟ್ರೋಲ್ಗಳಿಗೆ ಉತ್ತರ ನೀಡಿದುವು, ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ನಮ್ಮನ್ನು, ನಮ್ಮ ಮದುವೆಯನ್ನು ದ್ವೇಷಿಸುವವರು ಫ್ರಿಡ್ಜ್, ಸೂಟ್ಕೇಸ್, ಅಕ್ರಮ ಮದುವೆ, ಮತಾಂತರ, ಅದು ಇದು ಅಂತಾರೆ, ಆದರೆ ನಾವು ಸಖತ್ ಖುಷಿಯಾಗಿ ಇರುವುದಾಗಿ ಸ್ವರಾ ಭಾಸ್ಕರ್ ಟ್ವೀಟ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.