ಮಲ್ಲೂರು ಗ್ರಾಪಂ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದ ಇನಾಯತ್ ಅಲಿ
Tuesday, March 7, 2023
ಸುರತ್ಕಲ್: ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳು ಜನರಿಗೆ ಆಸರೆಯಾಗಲಿದ್ದು, ಬೆಲೆಯೇರಿಕೆ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.
ಮಲ್ಲೂರು ಗ್ರಾ.ಪಂ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಲಾಗಿದ್ದು, ಈ ವೇಳೆ ಅವರು ಮಾತನಾಡುತ್ತಿದ್ದರು.
ಈ ವೇಳೆ ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಆರ್.ಕೆ, ರಾಜ್ ಕುಮಾರ್ ಶೆಟ್ಟಿ ವಾಮಂಜೂರು, ಯು.ಪಿ.ಇಬ್ರಾಹಿಂ, ಮಲ್ಲೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುದೀರ್ ರಾವ್, ಎಮ್.ಕೆ.ಯೂಸುಫ್, ಅಫ್ಸತ್ ಪೆರ್ಮಂಕಿ, ಅಬೂಸಲಿ ದೆಮ್ಮಲೆ, ಅಬ್ದುಲ್ಲಾ ಮಲ್ಲೂರು, ಹಸನ್ ಬಾವ, ನೌಫಲ್ ಉದ್ದಬೆಟ್ಟುರವರು ಇದ್ದರು. ಇವರ ಜೊತೆಗೆ ಶ್ರೀ ಪುರುಷೋತ್ತಮ್ ಚಿತ್ರಾಪುರ, ಮೊಹಮ್ಮದ್ ಶಮೀರ್, ಸಾಧಿಕ್ ಬದ್ರಿಯಾ ನಗರ, ಇಕ್ಬಾಲ್ ಕಿನ್ನಿಕಟ್ಟ, ಜಬ್ಬಾರ್ ಮಲ್ಲೂರು, ಅಶ್ರಫ್ ಬದ್ರಿಯಾ ನಗರ ಸೇರಿದಂತೆ ಇನ್ನಿತರರು ಇದ್ದರು .