ಜಾಮೀನು ಸಿಕ್ಕಿದ ಕೂಡಲೇ ಮೆರವಣಿಗೆಯ ಮೂಲಕ ಚನ್ನಗಿರಿಯ ನಿವಾಸಕ್ಕೆ ವಾಪಸ್‌ ಆದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಹೇಳಿದ್ದೇನು...?

ಜಾಮೀನು ಸಿಕ್ಕಿದ ಕೂಡಲೇ ಮೆರವಣಿಗೆಯ ಮೂಲಕ ಚನ್ನಗಿರಿಯ ನಿವಾಸಕ್ಕೆ ವಾಪಸ್‌ ಆದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಹೇಳಿದ್ದೇನು...?

ದಾವಣಗೆರೆ: ಪುತ್ರನ ಮನೆ ಹಾಗು ಕಚೇರಿ ಮೇಲೆ ಲೋಕಾಯುಕ್ತ ದಾಳಿ ವೇಳೆ ಕೋಟ್ಯಂತರ ರೂ. ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ, ಚನ್ನಗಿರಿಯ ನಿವಾಸಕ್ಕೆ ವಾಪಸ್‌ ಆಗಿದ್ದು, ಈ ವೇಳೆ ಕಾರಿನಲ್ಲಿ ಮೆರವಣಿಗೆ ಮಾಡಿ ಅವರನ್ನು ಹೂ-ಹಾರ ಹಾಕಿ ಸ್ವಾಗತಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಲೋಕಾಯುಕ್ತ ದಾಳಿ ವೇಳೆ ಸಿಕ್ಕಿರುವ ಹಣವೆಲ್ಲವೂ ನಮ್ಮದೇ, ಅದಕ್ಕೆ ನಮ್ಮ ಬಳಿ ಸೂಕ್ತ ದಾಖಲೆ ಇದೆ. ಮತ್ತೆ ಆ ಹಣವನ್ನು ದಾಖಲೆ ನೀಡಿ ವಾಪಸ್ ಪಡೆಯುತ್ತೇವೆ ಎಂದರು.

ಲೋಕಾಯುಕ್ತ ದಾಳಿಯ ಮೂಲಕ ನನ್ನ ಮತ್ತು ಕುಟುಂಬದ ವಿರುದ್ಧ ಯಾರೋ ಷಡ್ಯಂತ್ರ ನಡೆಸಿದ್ದಾರೆ. ಎಲ್ಲದಕ್ಕೂ ನಾನು ಮುಂದೆ ಉತ್ತರ ಕೊಡುತ್ತೇನೆ ಎಂದರು.

Ads on article

Advertise in articles 1

advertising articles 2

Advertise under the article