ಮುತ್ತುಗಳ ದ್ವೀಪದಲ್ಲಿ ಕರಾವಳಿಯ ಕಲರವ: ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮ "ಕರಾವಳಿ ಸಂಭ್ರಮ"ಕ್ಕೆ ವೇದಿಕೆ ಸಜ್ಜು

ಮುತ್ತುಗಳ ದ್ವೀಪದಲ್ಲಿ ಕರಾವಳಿಯ ಕಲರವ: ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮ "ಕರಾವಳಿ ಸಂಭ್ರಮ"ಕ್ಕೆ ವೇದಿಕೆ ಸಜ್ಜು

ಬಹರೈನ್ ; ಇಲ್ಲಿನ ಇಂಡಿಯನ್ ಕ್ಲಬ್ಬಿನ ಹೊರಾಂಗಣ ಕ್ರೀಡಾಂಗಣದಲ್ಲಿ ಇದೆ ಮಾರ್ಚ್ ತಿಂಗಳ 17ನೇ ತಾರೀಖಿನ ಶುಕ್ರವಾರದಂದು "ಕರಾವಳಿ ಸಂಭ್ರಮ " ಎನ್ನುವಂತಹ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಕಾರ್ಯಕ್ರಮವು ಸಂಜೆ 4 ಘಂಟೆಗೆ ಸರಿಯಾಗಿ ಚಾಲನೆಗೊಳ್ಳಲಿದೆ . 

"ಗಿರಗಿಟ್ " ತುಳು ಚಿತ್ರದ ಖಡಕ್ ವಿಲನ್ ಆಗಿ ತುಳುನಾಡಿನ ಜನರ ಮನಸ್ಸನ್ನು ಗೆದ್ದಿರುವ ರೋಷನ್ ಶೆಟ್ಟಿ ಯವರ ಸಾರಥ್ಯದಲ್ಲಿ ಕರಾವಳಿಯ ಕಲೆ,ಸಂಸ್ಕ್ರತಿಯನ್ನು ದ್ವೀಪದಲ್ಲಿ ಪಸರಿಸುವ "ಕರಾವಳಿ ಸಂಭ್ರಮ "  ಕಾರ್ಯಕ್ರಮವು ಜರುಗಲಿದ್ದು , ಕಾರ್ಯಕ್ರಮಕ್ಕೆ  ದಿನಗಣನೆ ಶುರುವಾಗಿದೆ . ದ್ವೀಪದ ಕನ್ನಡಿಗ ತುಳುವ ಸಮುದಾಯದಲ್ಲಿ ಇದಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು ಸಾವಿರಾರು ಜನರು ಈ ಬ್ರಹತ್ ಸಾಂಸ್ಕ್ರತಿಕ ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ . 


ಈ ಕಾರ್ಯಕ್ರಮಕ್ಕೆ ನಾಡಿನ ಖ್ಯಾತ ಸಂಗೀತ ನಿರ್ದೇಶಕ ,ಗಾಯಕ ಗುರುಕಿರಣ್ ,ತುಳು ರಂಗಭೂಮಿ ಹಾಗು ಚಲನ ಚಿತ್ರ ನಟ ,ನಿರ್ದೇಶಕ ಡಾ ;ದೇವದಾಸ್ ಕಾಪಿಕಾಡ್ ,ಖ್ಯಾತ ನಟ ಹಾಗು ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ, ಆಸ್ಟ್ರೇಲಿಯಾದ ಖ್ಯಾತ ಕನ್ನಡಿಗ ಉದ್ಯಮಿ ನಿಶಿಕಾಂತ್ ಸೆಮಿತ ,ಸೌದಿ ಅರೇಬಿಯಾದ ಖ್ಯಾತ ಉದ್ಯಮಿ ಬಜ್ಪೆ ಝಕಾರಿಯಾ , ಕೆ. ಎಸ್.ಶೇಖ್ ,ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ವಿವೇಕ್ ಆಳ್ವಾ ,"ಬಿರುವೆರ್ ಕುಡ್ಲ "ದ ಸ್ಥಾಪಕರಾದ ಉದಯ್ ಪೂಜಾರಿ  ,ಶ್ರೀಮತಿ ಶರ್ಮಿಳಾ .ಡಿ .ಕಾಪಿಕಾಡ್ ,ಎವರ್ ಗ್ರೀನ್ ಬಯೋಟೆಕ್ ಇಂಡಿಯಾ ಸಂಸ್ಥೆಯ್ ಆಡಳಿತ ನಿರ್ದೇಶಕ ಅಶ್ವಥ್ ಹೆಗ್ಡೆ ,ನಾಡಿನ ಜನಪ್ರಿಯ ನಿರೂಪಕ ಹಾಗು ಆರ್ . ಜೆ ಅನುರಾಗ್ ಬಂಗೇರ ,ನಟ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ ,ಖ್ಯಾತ ಸಂಗೀತ ನಿರ್ದೇಶಕ ಗುರು ಬಾಯಾರ್ ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ .

ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿರುವ ಪ್ರತಿಭಾ ಸ್ಪರ್ಧೆಯಲ್ಲಿ   ದ್ವೀಪದ ಪ್ರತಿಭಾವಂತ ಕಲಾವಿದರುಗಳ  "ಕಲಶ " "ಬಹರೈನ್ ಬಿಲ್ಲವಾಸ್ " "ತುಳುನಾಡ ತುಡರ್ " "ಕೆನರಾ ಕೊಂಕಣ್ಸ್" "ವಿಶ್ವ ತರಂಗ " ಹಾಗು "ವಿಶ್ವ ತರಂಗ " ಎನ್ನುವಂತಹ 5 ತಂಡಗಳು ಸ್ಪರ್ಧಿಸಲಿದ್ದು  ನಾಡಿನ ವೈವಿಧ್ಯಮಯ ಕಲಾಪ್ರಕಾರಗಳನ್ನು ರಂಗದಲ್ಲಿ ಅನಾವರಣಗೊಳಿಸಲಿದ್ದಾರೆ .   ಡಾ ದೇವದಾಸ್ ಕಾಪಿಕಾಡ್ ಹಾಗು ತಂಡದವರಿಂದ "ಕೋಮಿಡಿ ಬಿತ್ತಿಲ್ " ಎನ್ನುವಂತಹ ಹಾಸ್ಯ ಪ್ರಹಸನ ಹಾಗು ಗುರಕಿರಣ್ ರವರ ಹಾಡುಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿದೆ . ಕಾರ್ಯಕ್ರಮದ ಆರಂಭದಲ್ಲಿ ದ್ವೀಪದ ಕಲಾವಿದರುಗಳಿಂದ ತುಳುನಾಡಿನ ಹೆಮ್ಮೆಯ ಕಲೆಯಾದ "ಹುಲಿ ಕುಣಿತ' ದ ಪ್ರದರ್ಶನವಿದ್ದು ನಾಡಿನ ಖ್ಯಾತ ತಾಸೆ ವಾದಕರಾದಂತಹ ಪ್ರಭಾಕರ್ ಉರಿಂಜೆಬೆಟ್ಟು  ಇದಕ್ಕಾಗಿಯೇ ವಿಶೇಷವಾಗಿ ದ್ವೀಪಕ್ಕೆ ಆಗಮಿಸಲಿದ್ದಾರೆ . ಕರಾವಳಿಯ ಜನಪ್ರಿಯ ತಿಂಡಿ ,ತಿನಸುಗಳ ,ಆಹಾರ ಪದಾರ್ಥಗಳ ಪ್ರದರ್ಶನ ಹಾಗು ಮಾರಾಟ ಇರಲಿದೆ . ಸಂಪೂರ್ಣ ಕಾರ್ಯಕ್ರಮವನ್ನು ತನ್ನ ಕ್ಯಾಮಾರದಲ್ಲಿ  ನಾಡಿನ ಖ್ಯಾತ ಛಾಯಾಗ್ರಾಹಕ ದಯಾನಂದ್  ಕುಕ್ಕಾಜೆ ಸೆರೆ ಹಿಡಿಯಲಿದ್ದರೆ ,ಈ ಒಟ್ಟು ಕಾರ್ಯಕ್ರಮವನ್ನು ನಾಡಿನ ಖ್ಯಾತ ನಿರೂಪಕ ಅನುರಾಗ್ ಬಂಗೇರ ರವರು ನಿರೂಪಿಸಲಿದ್ದಾರೆ . ಈ ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಕಲಾಪ್ರೇಮಿಗಳಿಗೆ ಪ್ರವೇಶ ಮುಕ್ತವಾಗಿದ್ದು ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಶ್ರೀ ರೋಷನ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 39788945 ಮೂಲಕ ಸಂಪರ್ಕಿಸಬಹುದು . 

ವರದಿ-ಕಮಲಾಕ್ಷ ಅಮೀನ್ 

Ads on article

Advertise in articles 1

advertising articles 2

Advertise under the article