ಶಿವಮೊಗ್ಗದಲ್ಲಿರುವಂತಹ ಮುಸ್ಲಿಮರು ಗಲಾಟೆ ಮಾಡುವವರಲ್ಲ,  ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ: ಈಶ್ವರಪ್ಪ ವೀಡಿಯೊ ವೈರಲ್

ಶಿವಮೊಗ್ಗದಲ್ಲಿರುವಂತಹ ಮುಸ್ಲಿಮರು ಗಲಾಟೆ ಮಾಡುವವರಲ್ಲ, ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ: ಈಶ್ವರಪ್ಪ ವೀಡಿಯೊ ವೈರಲ್

ಶಿವಮೊಗ್ಗ: 'ಶಿವಮೊಗ್ಗದಲ್ಲಿರುವಂತಹ ಮುಸ್ಲಿಮರು ಗಲಾಟೆ ಮಾಡುವವರಲ್ಲ,  ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ, ನಾನು ಇಲ್ಲ ಎನ್ನುವುದಿಲ್ಲ, ಆದರೆ ಏನು ಪ್ರಶ್ನೆ ...? ಹಿಂದೂಗಳು ತಲೆಹರಟೆ ಮಾಡಿದ್ರೂ, ಮುಸ್ಲಿಂ ತಲೆ ಹರಟೆ ಮಾಡಿದ್ರೂ ಇಂಥಹ ಗಲಾಟೆಗಳು ಶುರುವಾಗುತ್ತೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿರುವ ವೀಡಿಯೊವೊಂದು ಈಗ ಭಾರೀ ವೈರಲ್ ಆಗಿದೆ.

ಆಝಾನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಇದೀಗ ಶಿವಮೊಗ್ಗದಲ್ಲಿ ಮುಸ್ಲಿಂ ಮುಖಂಡರೊಂದಿಗೆ 3 ದಿನಗಳ ಹಿಂದೆ ಈಶ್ವರಪ್ಪ ಮಾತನಾಡಿರುವ ವೀಡಿಯೊ ಸಖತ್ ವೈರಲ್ ಆಗುತ್ತಿದೆ.

ಶಿವಮೊಗ್ಗದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು ಹಾಗೂ ಮಹಿಳೆಯರು ಶುಕ್ರವಾರ ಸಂಜೆ ಈಶ್ವರಪ್ಪ ಮನೆಯಲ್ಲಿ ಸೇರಿದ್ದರು. ಈ ವೇಳೆ ಅಲ್ಲಿದ್ದ ಮುಸ್ಲಿಂ ಮುಖಂಡರೊಂದಿಗೆ ಮಾತನಾಡುತ್ತಾ, ತಾನು  ಮುಸ್ಲಿಂ ವಿರೋಧಿ ಅಲ್ಲ, ಶಿವಮೊಗ್ಗ ಮುಸ್ಲಿಮರು ಒಳ್ಳೆಯವರು ಎಂದರು.

ವಿಡಿಯೋದಾಳಿ ಏನಿದೆ...?

'ಒಂದು ತಿಳಿದುಕೊಳ್ಳಿ, ಶಿವಮೊಗ್ಗದಲ್ಲಿರುವಂತಹ ಮುಸ್ಲಿಮರು ಗಲಾಟೆ ಮಾಡುವವರಲ್ಲ, ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ, ನಾನು ಇಲ್ಲ ಎನ್ನುವುದಿಲ್ಲ, ಆದರೆ ಏನು ಪ್ರಶ್ನೆ ...? ಹಿಂದೂಗಳು ತಲೆಹರಟೆ ಮಾಡಿದರೂ, ಮುಸ್ಲಿಂ ತಲೆ ಹರಟೆ ಮಾಡಿದರೂ ಇಂಥಹ ಗಲಾಟೆಗಳು ಶುರುವಾಗುತ್ತೆ, ಅಲ್ಲೊಂದು ನಾಲ್ಕು ಜನ, ಇಲ್ಲೊಂದು ನಾಲ್ಕು ಜನರಿಂದ ಗಲಾಟೆ ಆರಂಭವಾಗುತ್ತೆ. ನಾನು ತಪ್ಪು ಮಾಡಿದ್ದರೆ ಇದೇ ಸಭೆಯಲ್ಲಿ ಹೇಳಿ, ನಾನು ಯಾಕೆ ಗಲಾಟೆ ಮಾಡ್ತೀನಿ ಎಂದರೆ ಸಮಾಜದಲ್ಲಿ ಅಶಾಂತಿ ತಲೆದೋರಿದಾಗ ಮಾತ್ರ' ಎಂದು ಹೇಳಿರುವ ಈಶ್ವಪ್ಪರ ವೀಡಿಯೊ ವೈರಲ್ ಆಗಿದೆ.

'ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ, ನಾನು ಯಾವಾಗ ಗಲಾಟೆ ಮಾಡಿದ್ದು? ಶಿವಪ್ಪ ನಾಯಕ ವೃತ್ತದ ಬಳಿ SDPI ಸಮಾವೇಶ ನಡೆದಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾವನೋ ಕೂಗಿದ, ಇದನ್ನ ನೀವೂ ವಿರೋಧಿಸುತ್ತೀರಾ? ನೀವು ಸುಮ್ಮನಿರ್ತೀರಾ? ಆದರೆ ನಾನು ವಿರೋಧಿಸುತ್ತೇನೆ, ಗಾಜನೂರಿನಲ್ಲಿ ತಲವಾರ್ ಬೀಸಿದರು, ಇದನ್ನ ಯಾರು ಖಂಡಿಸುತ್ತಾರೆ? ಇವರೆಲ್ಲಾ ಶಿವಮೊಗ್ಗದವಾ? ಬಿಜೆಪಿಯಲ್ಲಿರುವ ಅನೇಕರು ಇದನ್ನ ವಿರೋಧಿಸುವುದೇ ಇಲ್ಲ, ಆದರೆ ನಾನು ವಿರೋಧಿಸುತ್ತೇನೆ' ಎಂದು ಈಶ್ವರಪ್ಪ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article