ದುಬೈಯಲ್ಲಿ ಎಪ್ರಿಲ್ 1ರಂದು BCFನಿಂದ ಸೌಹಾರ್ದತಾ ಇಫ್ತಾರ್ ಕೂಟ
Thursday, March 30, 2023
ದುಬೈ: ಬ್ಯಾರಿಸ್ ಕಲ್ಚರಲ್ ಫೋರಂ ದುಬೈ ಯುಎಇಯ ವತಿಯಿಂದ ಪ್ರತಿ ವರ್ಷದಂತೆ ನಡೆಸಿಕೊಂಡು ಬರುತ್ತಿರುವ ಸೌಹಾರ್ದತಾ ಇಫ್ತಾರ್ ಕೂಟವು ಎಪ್ರಿಲ್ 1ರ ಶನಿವಾರದಂದು ದುಬೈನಲ್ಲಿ ನಡೆಯಲಿದೆ.
ದುಬೈಯ ದೇರಾದ 'ದುಬೈ ಹಾಸ್ಪಿಟಲ್'ನ ಮುಂಭಾಗದಲ್ಲಿರುವ ದುಬೈ ವಿಮೆನ್ ಅಸೋಸಿಯೇಷನ್ ಬಿಲ್ಡಿಂಗ್'ನ ಅಲ್ ಝಹಿಯ ಬ್ಯಾಂಕ್ವೆಟ್ ಹಾಲ್'ನಲ್ಲಿ ಸಂಜೆ ಐದು ಗಂಟೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಇಫ್ತಾರ್ ಕೂಟವು ಜರಗಲಿದೆ.
ಯುಎಇಯಲ್ಲಿ ಇರುವ ಎಲ್ಲ ಕರ್ನಾಟಕ ಪರ ಸಂಘ ಸಂಸ್ಥೆಗಳ ಸದಸ್ಯರು ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಬೇಕಾಗಿ BCFನ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರು ತಿಳಿಸಿದ್ದಾರೆ.