ಜುಲೇಲಾಲ್ ದೇವಸ್ಥಾನದ ಮೇಲ್ಛಾವಣಿ ಕುಸಿದು ಬಾವಿಗೆ ಬಿದ್ದ 25 ಕ್ಕೂ ಹೆಚ್ಚು ಜನ! ಈ ವೀಡಿಯೊ ನೋಡಿ...
Thursday, March 30, 2023
ಇಂದೋರ್: ರಾಮನವಮಿ ದಿನ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದು 25 ಮಂದಿ ಬಾವಿಗೆ ಬಿದ್ದಿರುವ ಘಟನೆ ಮಧ್ಯ ಪ್ರದೇಶ ಇಂದೋರ್‌ನ ಪಟೇಲ್ ನಗರದಲ್ಲಿ ನಡೆದಿದೆ.
ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈಗಾಗಲೇ ಸ್ಥಳಕ್ಕೆ ಧಾವಿಸಿದೆ.
ಇಂದೋರ್‌ನ ಪಟೇಲ್ ನಗರ ಪ್ರದೇಶದಲ್ಲಿ ಬಾವಿಯ ಮೇಲ್ಛಾವಣಿ ಕುಸಿದು ಪರಿಣಾಮ 25 ಕ್ಕೂ ಹೆಚ್ಚು ಜನರು ಬಾವಿಗೆ ಬಿದ್ದಿದ್ದಾರೆ. ಬಾವಿಗೆ ಬಿದ್ದವರನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ರಾಮನವಮಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಭಕ್ತರ ದಂಡೇ ನೆರೆದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
#WATCH | Madhya Pradesh: Many feared being trapped after a stepwell at a temple collapsed in Patel Nagar area in Indore.
— ANI MP/CG/Rajasthan (@ANI_MP_CG_RJ) March 30, 2023
Details awaited. pic.twitter.com/qfs69VrGa9