ಹಿಂದೂ ಹೆಣ್ಣು ಮಕ್ಕಳ ಗೌರವ, ಘನತೆಯೊಂದಿಗೆ ಆಟವಾಡುವವರ ಕೈಗಳನ್ನು ಕತ್ತರಿಸುತ್ತೇವೆ: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ

ಹಿಂದೂ ಹೆಣ್ಣು ಮಕ್ಕಳ ಗೌರವ, ಘನತೆಯೊಂದಿಗೆ ಆಟವಾಡುವವರ ಕೈಗಳನ್ನು ಕತ್ತರಿಸುತ್ತೇವೆ: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ

ಪಾಟ್ನಾ: ಸನಾತನ ಹಿಂದೂ ಧರ್ಮಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಅವಮಾನಿಸುವವರ, ಘನತೆಯೊಂದಿಗೆ ಆಟವಾಡುವವರ ಕೈಗಳನ್ನು ಕಡಿಯುವುದಾಗಿ ಬಿಜೆಪಿಯ ಲೋಕಸಭಾ ಸಂಸದ ಹಾಗೂ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ  ವಿವಾದಾತ್ಮಕ ಹೇಳಿದ್ದಾರೆ.

ಸನಾತನ ಧರ್ಮದ ಹೆಣ್ಣುಮಕ್ಕಳನ್ನು ಯಾರು ಅವರ ಗೌರವ ಮತ್ತು ಘನತೆಯೊಂದಿಗೆ ಆಟವಾಡುತ್ತಾರೋ ಅಂತವರ ಕೈಗಳನ್ನು ಕತ್ತರಿಸುತ್ತೇನೆ ಎಂದಿರುವ ಚೌಬೆ, ಒಂದು ವೇಳೆ RJD ನಾಯಕರು ತಮ್ಮ ಹೆಣ್ಣು ಮಕ್ಕಳನ್ನು ಬೇರೆಯವರಿಗೆ ಮದುವೆ ಮಾಡುವುದಾದರೆ ಅವರು ಹಾಗೆ ಮಾಡಲು ಸ್ವತಂತ್ರರು. ನಮ್ಮದು ಹಿಂದೂ ರಾಷ್ಟ್ರವಾಗಿದ್ದು, ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತೆ ಎಂದು ಚೌಬೆ ಶನಿವಾರ ಹೇಳಿದರು.

BJP ನಾಯಕರಾದ ಎಲ್ ಕೆ ಅಡ್ವಾಣಿ ಹಾಗು ಮುರಳಿ ಮನೋಹರ್ ಜೋಷಿ ಅವರ ಪುತ್ರಿಯರು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದು, ಬಿಜೆಪಿ ನಾಯಕರು ತಮ್ಮ ಪುತ್ರಿಯರನ್ನು ಮುಸ್ಲಿಮರಿಂದ ರಕ್ಷಿಸಬೇಕು ಎಂದು RJD ಶಾಸಕ ಭಾಯಿ ವೀರೇಂದ್ರ ಹೇಳಿಕೆ ನೀಡಿದ ಬೆನ್ನಲ್ಲೇ  ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಈ ಹೇಳಿಕೆ ನೀಡಿದ್ದಾರೆ.

ಜೊತೆಗೆ ಜೆಪಿಯ ಮತ್ತೊಬ್ಬ MLC ಸಂತೋಷ್ ಸಿಂಗ್ ಪ್ರತಿಕ್ರಿಯಿಸಿದ್ದು, RJD ನಾಯಕರು ಮಾನಸಿಕವಾಗಿ ದಿವಾಳಿಯಾಗಿದ್ದು, ಯಾವುದೇ ಮುಸ್ಲಿಂ ಯುವಕರು ಹಿಂದೂ ಸಮುದಾಯದ ಹೆಣ್ಣುಮಕ್ಕಳ ಕಡೆಗೆ ಬೆರಳು ತೋರಿಸಿದರೂ ನಾನು ಅವರ ಬೆರಳನ್ನು ಕತ್ತರಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article