ಮೂಳೂರು ಸಿರಾಜುಲ್ ಇಸ್ಲಾಂ ಅರಬಿಕ್ ಮದರಸದ ನೂತನ ಅಧ್ಯಕ್ಷರಾಗಿ ವೈಬಿಸಿ ಅಹ್ಮದ್ ಬಾವ ಅವಿರೋಧ ಆಯ್ಕೆ
Sunday, March 19, 2023
ಮೂಳೂರು: ಇಲ್ಲಿನ ಮೂಳೂರು ಜುಮ್ಮಾ ಮಸೀದಿ ಅದೀನದ ಸಿರಾಜುಲ್ ಇಸ್ಲಾಂ ಅರಬಿಕ್ ಮದರಸದ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ವೈಬಿಸಿ ಅಹ್ಮದ್ ಬಾವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೈಬಿಸಿ ಅಹ್ಮದ್ ಬಾವ ಹಲವಾರು ಸಾಮಾಜಿಕ, ಧಾರ್ಮಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮದರಸದ ಮಹಾಸಭೆಯು ಮದರಸ ಅಧ್ಯಕ್ಷರಾದ ವೈಬಿಸಿ ಅಹ್ಮದ್ ಬಾವರ ಅಧ್ಯಕ್ಷತೆಯಲ್ಲಿ ಮದರಸ ಹಾಲ್ ನಲ್ಲಿ ಜರಗಿತು. ಮಸೀದಿ ಅಧ್ಯಕ್ಷ ಸೈಯ್ಯದ್ ಮುರಾದ್ ಅಲಿ ಅವರ ಉಸ್ತುವಾರಿಯಲ್ಲಿ 2023-24 ಸಾಲಿನ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷ : ವೈಬಿಸಿ ಅಹ್ಮದ್ ಬಾವ
ಉಪಾಧ್ಯಕ್ಷ : ಶರೀಫ್ ಹಸ್ಸನ್
ಪ್ರಧಾನ ಕಾರ್ಯದರ್ಶಿ : ಅಬ್ದುಲ್ ಹಮೀದ್ ಫಕೀರ್
ಕಾರ್ಯದರ್ಶಿ : ಅಬ್ದುಲ್ ರಝಕ್ ನಿಟ್ಟೆ.
ಕೋಶಾಧಿಕಾರಿ : ಹಾಜಿ ಅಬ್ಬು ಮುಹಮ್ಮದ್