ಈ ಬಾರಿಯ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ: ಯಾರಿಗೆಲ್ಲಾ ಫೈನಲ್‌? ಇಲ್ಲಿದೆ ಮಾಹಿತಿ....

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ: ಯಾರಿಗೆಲ್ಲಾ ಫೈನಲ್‌? ಇಲ್ಲಿದೆ ಮಾಹಿತಿ....

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಸರಕಾರ ರಚಿಸಲು ತಿದಿಗಳಲ್ಲಿ ನಿಂತಿರುವ ಕಾಂಗ್ರೆಸ್, ತನ್ನ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳು ಅಲ್ಲಿ ಚರ್ಚೆಯಾಗಿ ಅಂತಿಮವಾಗಲಿದ್ದು, ಬಹುತೇಕ ನಾಳೆಯೇ ಘೋಷಣೆ ಆಗಲಿದೆ. 

ಕರಾವಳಿ ಭಾಗದ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಮಂಗಳೂರು ಕ್ಷೇತ್ರದಿಂದ ಯು.ಟಿ.ಖಾದರ್, ಬಂಟ್ವಾಳ-ರಮಾನಾಥ ರೈ, ಕಾಪು ಕ್ಷೇತ್ರದಿಂದ ವಿನಯ್ ಕುಮಾರ್ ಸೊರಕೆ, ಬೈಂದೂರು - ಗೋಪಾಲ್ ಪೂಜಾರಿ, ಮಂಗಳೂರು ಉತ್ತರ - ಇನಾಯತ್ ಅಲಿ ಅವರಿಗೆ ಟಿಕೆಟ್ ಪಕ್ಕ ಆಗಿದ್ದು, ಘೋಷಣೆಯೊಂದೇ ಬಾಕಿ ಇದೆ.

ಸ್ಕ್ರೀನಿಂಗ್ ಕಮಿಟಿಯಲ್ಲಿ ಈಗಾಗಲೇ ಹಲವು ಕ್ಷೇತ್ರಗಳಿಗೆ ಒಬ್ಬರ ಹೆಸರನ್ನೇ ಅಂತಿಮಗೊಳಿಸಿ ಕಳುಹಿಸಿದ್ದಾರೆ, ಇನ್ನೂ ಕೆಲವು ಕಡೆ  ಇಬ್ಬರು ಆಕಾಂಕ್ಷಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಕಳಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿಯಿಂದ ಹೈಕಮಾಂಡ್‌ಗೆ ಕಳುಹಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ...

ಒಬ್ಬರ ಹೆಸರು ಶಿಫಾರಸ್ಸು ಮಾಡಿರುವ ಕ್ಷೇತ್ರ.... 

ಸೊರಬ - ಮಧು ಬಂಗಾರಪ್ಪ

ಹಿರೇಕೆರೂರು - ಯುಬಿ ಬಣಕಾರ್

ಬಸವನಗುಡಿ- ಯುಬಿ ವೆಂಕಟೇಶ್

ಮಂಗಳೂರು-ಯು.ಟಿ.ಖಾದರ್ 

ಬಂಟ್ವಾಳ-ರಮಾನಾಥ ರೈ 

ಮಂಗಳೂರು ಉತ್ತರ - ಇನಾಯತ್ ಅಲಿ

ಹಿರಿಯೂರು - ಸುಧಾಕರ್

ಚಿತ್ರದುರ್ಗ - ಕೆ ಸಿ ವಿರೇಂದ್ರ ಪಪ್ಪಿ

ರಾಮನಗರ - ಇಕ್ಬಾಲ್ ಹುಸೇನ್

ಮಾಗಡಿ - ಬಾಲಕೃಷ್ಣ

ವಿರಾಜಪೇಟೆ - ಪೊನ್ನಣ್ಣ

ಹೊಸಕೋಟೆ- ಶರತ್ ಬಚ್ಚೇಗೌಡ

ಚಿಕ್ಕಬಳ್ಳಾಪುರ - ಕೊತ್ತೂರ್ ಮಂಜುನಾಥ್

ನಿಪ್ಪಾಣಿ - ಕಾಕಾಸಾಹೇಬ್ ಪಾಟೀಲ್

ಚಿಂತಾಮಣಿ - ಎಂಸಿ ಸುಧಾಕರ್

ಟಿ. ನರಸಿಪುರ - ಸುನಿಲ್ ಬೋಸ್

ಕನಕಗಿರಿ - ಶಿವರಾಜ್ ತಂಗಡಗಿ

ಹುಕ್ಕೇರಿ - ಎ.ಬಿ ಪಾಟೀಲ್

ಹುನಗುಂದ - ವಿಜಯಾನಂದ ಕಾಶಪ್ಪನವರ್

ಗೋಕಾಕ್ - ಅಶೋಕ್ ಪೂಜಾರಿ

ಮುದ್ದೇಬಿಹಾಳ - ಸಿ.ಎಸ್ ನಾಡಗೌಡ

ರಾಯಚೂರು - ಎನ್.ಎಸ್ ಬೋಸರಾಜ್

ಭಟ್ಕಳ - ಮಂಕಾಳ ವೈದ್ಯ

ಯಲಬುರ್ಗಾ - ಬಸವರಾಜ್ ರಾಯರೆಡ್ಡಿ

ಕಾರವಾರ - ಸತೀಶ್ ಸೈಲ್

ಹಾನಗಲ್ - ಶ್ರೀನಿವಾಸ್ ಮಾನೆ

ಕಾಪು - ವಿನಯ್ ಕುಮಾರ್ ಸೊರಕೆ

ಬೈಂದೂರು - ಗೋಪಾಲ್ ಪೂಜಾರಿ

ಕೋಲಾರ - ಸಿದ್ದರಾಮಯ್ಯ

ಕಲಘಟಗಿ - ಸಂತೋಷ್ ಲಾಡ್

ಇಬ್ಬರ ಹೆಸರು ಶಿಫಾರಸ್ಸು ಮಾಡಿರುವ ಕ್ಷೇತ್ರಗಳು...

ಬಳ್ಳಾರಿ ಸಿಟಿ - ಅಲ್ಲಂ ಪ್ರಶಾಂತ್/ ಅನಿಲ್ ಲಾಡ್

‌ಹೊಳಲ್ಕೆರೆ - ಸವಿತಾ ರಘು/ ಆಂಜನೇಯ

ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ

ಚಿಕ್ಕಪೇಟೆ - ಮನ್ಸೂರ್ ಅಲಿ ಖಾನ್/ ಆರ್.ವಿ.ದೇವರಾಜು

ಗಂಗಾವತಿ - ಇಕ್ಬಾಲ್ ಅನ್ಸಾರಿ/ ಎಚ್.ಆರ್ ಶ್ರೀನಾಥ್

ಕಲಬುರಗಿ ಗ್ರಾಮೀಣ - ರೇವುನಾಯಕ ಬೆಳಮಗಿ/ ವಿಜಯಕುಮಾರ್

ಶಿಗ್ಗಾಂವಿ - ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ

ಬೆಳಗಾವಿ ಉತ್ತರ - ಫೀರೋಜ್ ಸೇಠ್/ ಆಸೀಫ್ ಸೇಠ್

ತೇರದಾಳ್ - ಉಮಾಶ್ರೀ/ ಮಲ್ಲೇಶಪ್ಪ

ಬಾಗಲಕೋಟೆ - ಎಚ್ ವೈ ಮೇಟಿ/ ದೇವರಾಜ್ ಪಾಟೀಲ್

ಕಾಗವಾಡ - ರಾಜೂ ಕಾಗೆ/ ದಿಗ್ವಿಜಯ್ ದೇಸಾಯಿ

ಕುಡಚಿ - ಶ್ಯಾಮ್ ಭೀಮ್ ಘಾಟ್ಗೆ/ ಮಹೇಂದ್ರ ತಮ್ಮಣ್ಣ

ಅಥಣಿ - ಗಜಾನನ್ ಮಂಗಸೂಳಿ/ ಶ್ರೀಕಾಂತ್ ಪೂಜಾರಿ

ನಂಜನಗೂಡು - ದರ್ಶನ್ ಧ್ರುವನಾರಾಯಣ/ ಮಹದೇವಪ್ಪ

ಚಾಮುಂಡೇಶ್ವರಿ - ಮರಿಗೌಡ/ ಚಂದ್ರಶೇಖರ್

ಮಂಗಳೂರು ದಕ್ಷಿಣ - ಐವಾನ್ ಡಿಸೋಜಾ/ ಜೆ ಆರ್ ಲೋಬೋ

ಬೆಳ್ತಂಗಡಿ- ರಕ್ಷಿತ್ ಶಿವರಾಂ/ ಗಂಗಾಧರ ಗೌಡ

ದಾಸರಹಳ್ಳಿ- ಕೃಷ್ಣಮೂರ್ತಿ/ ಸಿ.ಎಂ ಧನಂಜಯ

ಬೆಂಗಳೂರು ಸೌತ್- ಆರ್ ಕೆ ರಮೇಶ್/ ಸುಷ್ಮಾ ರಾಜಗೋಪಾಲ್

Ads on article

Advertise in articles 1

advertising articles 2

Advertise under the article