ಅಬುಧಾಬಿಯ ಭಾರತೀಯ ಧೂತಾವಾಸದ ಅಧಿಕಾರಿಗೆ "ಹೆಮ್ಮೆಯ ದುಬೈ  ಕನ್ನಡತಿ ಪ್ರಶಸ್ತಿ" ಪ್ರದಾನ

ಅಬುಧಾಬಿಯ ಭಾರತೀಯ ಧೂತಾವಾಸದ ಅಧಿಕಾರಿಗೆ "ಹೆಮ್ಮೆಯ ದುಬೈ ಕನ್ನಡತಿ ಪ್ರಶಸ್ತಿ" ಪ್ರದಾನ

ದುಬೈ: ದುಬೈಯಲ್ಲಿ ರವಿವಾರ ದೋಣಿ ವಿಹಾರದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅಬುಧಾಬಿಯಲ್ಲಿರುವ ಭಾರತೀಯ ಧೂತಾವಾಸ ಕೇಂದ್ರದಲ್ಲಿ ಕಮ್ಯುನಿಟಿ ಅಫೇರ್ಸ್ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರು ಮೂಲದ  ಬಾರ್ಕಿ ಗಾಯತ್ರಿ ಪ್ರಕಾಶ್  ಅವರಿಗೆ ಹೆಮ್ಮೆಯ ದುಬೈ ಕನ್ನಡ ಸಂಘದ ಮಹಿಳಾ ಘಟಕ ಹೆಮ್ಮೆಯ ಯುಎಇ ಕನ್ನಡತಿಯರ ತಂಡವು ನೀಡುವ 2023ನೇ ಸಾಲಿನ ಪ್ರತಿಷ್ಠಿತ 'ಹೆಮ್ಮೆಯ ಯುಎಇ ಕನ್ನಡತಿ ಪ್ರಶಸ್ತಿ' ನೀಡಿ ಗೌರವವಿಸಲಾಯಿತು.

ಗಾಯತ್ರಿ ಅವರು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಮನೆಕೆಲಸಕ್ಕೆ ಮತ್ತು ಇತರೆ ಸಣ್ಣ ಮಟ್ಟದ ಕೆಲಸ ಮಾಡಲು ಬಂದು ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಮಹಿಳೆಯರಿಗೆ ಒಂದು ತಿಂಗಳ ಕಾಲ ಎಂಬೆಸ್ಸಿ ಮುಖಾಂತರ ಇರಲು ಸ್ಥಳ ಮತ್ತು ಊಟದ ವ್ಯವಸ್ಥೆ ಕಲ್ಪಿಸಿ ಪಾಸ್ಪೋರ್ಟ್ ವೀಸಾ ವಿಮಾನ ಟಿಕೆಟ್ ಮೊದಲಾದ ದಾಖಲೆಗಳನ್ನು ಸರಿಪಡಿಸಿ ಸುರಕ್ಷಿತವಾಗಿ ಊರಿಗೆ ಕಳುಹಿಸುವಲ್ಲಿ ಸಹಕಾರ ನೀಡುತ್ತಿದ್ದರು.  ನಮ್ಮ ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗವು ಸಂಕಷ್ಟದಲ್ಲಿದ್ದ ಹಲವು ಕನ್ನಡತಿಯರು ಮತ್ತು ಕನ್ನಡೇತರ ಮಹಿಳೆಯರನ್ನು ಊರಿಗೆ ಕಳುಹಿಸುವಲ್ಲಿ ಅವರು  ಬಹಳ ಸಹಾಯ ಮಾಡಿದ್ದಾರೆ ಮತ್ತು ಈಗಲೂ ಸಹ ಸಹಾಯ ಮಾಡುತ್ತಿದ್ದಾರೆ.

ಹೆಮ್ಮೆಯ ಕನ್ನಡತಿಯರು ಸಮಿತಿ ಸದಸ್ಯೆಯೆರಾದ ಮಮತಾ ಮೈಸೂರು, ಪಲ್ಲವಿ ದಾವಣಗೆರೆ, ಅನಿತಾ ಬೆಂಗಳೂರು, ನಜೀರ ಮಂಡ್ಯ ಮತ್ತು ಸ್ವಾತಿ ಚಿತ್ರದುರ್ಗ ಮತ್ತಿತರರು ಹೆಮ್ಮೆಯ ಕನ್ನಡ ಸಂಘದ ಶಾಲ್ ಹೊದಿಸಿ ಹೆಮ್ಮೆಯ ಕನ್ನಡತಿ ಪ್ರಶಸ್ತಿ ಫಲಕ ಹಸ್ತಾಂತರಿಸಿ ಗೌರವಿಸಿದರು.

Ads on article

Advertise in articles 1

advertising articles 2

Advertise under the article