ಉಭಯ ಜಿಲ್ಲೆಗಳಲ್ಲಿ ಶಾಂತಿ ಸೌಹಾರ್ದತೆಗಾಗಿ ಮುಸ್ಲಿಂ ಸಮುದಾಯದ ಎಲ್ಲಾ ಸಂಘಟನೆಗಳು ಶ್ರಮಿಸುವಂತೆ ಮಸೂದ್ ಕರೆ
ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಥಮ ಕಾರ್ಯಕಾರಿ ಸಮಿತಿಯ ಸಭೆಯು ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಸ್ಥೆಯ ಕಛೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಸ್ತುತ ವಿದ್ಯಾಮಾನದ ಬಗ್ಗೆ ಚರ್ಚೆ ನಡೆದು ಉಭಯ ಜಿಲ್ಲೆಗಳಲ್ಲಿ ಶಾಂತಿ ಸೌಹಾರ್ದತೆಗಾಗಿ ಮುಸ್ಲಿಂ ಸಮುದಾಯದ ಎಲ್ಲಾ ಸಂಘಟನೆಗಳು ಶ್ರಮಿಸಬೆಕೆಂದು ಮೊಹಮ್ಮದ್ ಮಸೂದ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಕೋಡಿಜಾಲ್, ಕೆ. ಅಶ್ರಫ್, ಇಕ್ಬಾಲ್ ಅಹ್ಮದ್ ಮುಲ್ಕಿ, ಟಿ.ಎಸ್. ಅಬ್ದುಲ್ಲಾ, ಸೈಯದ್ ಇಸ್ಮಾಯಿಲ್, ಸೀರಾಜ್ ಅಹ್ಮದ್ ಇನ್ ಲ್ಯಾಂಡ್, ಎಂ ಶಬ್ಬಿರ್, ಅಶ್ರಫ್ ಸೌದಿ ಮೊದಲಾದವರು ಮಾತನಾಡಿದರು ಹಾಗೂ ಕೋಲಾರ ಜಿಲ್ಲೆಯ ಪೊಲೀಸ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈದ ಅಬ್ದುಲ್ ಲತೀಫ್ ಸಾಹೇಬ್ ಮತ್ತು ಕೇವಲ 30 ಸೆಕೆಂಡುಗಳಲ್ಲಿ ಪುಟ್ಬಾಲ್ ನೊಂದಿಗೆ 10 ನೆಟ್ ಮಗ್ ಮಾಡುವ ಮೂಲಕ ಹೊಸ ಗಿನ್ನೆಸ್ ದಾಖಲೆ ಬರೆದ ಮುಹಮ್ಮದ್ ಸಲೀಲ್ ದೇರಳಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರುಗಳಾದ ಸಿ.ಮಹಮೂದ್, ಬಾಷ ಸಾಹೇಬ್ ಕುಂದಾಪುರ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಪ್ರಾರಂಭದಲ್ಲಿ ಕಾರ್ಯದರ್ಶಿ ಬಿ. ಅಬೂಬಕ್ಕರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.