ಮೂಳೂರು ಸಿರಾಜುಲ್ ಇಸ್ಲಾಂ ಮದ್ರಸ ಹಾಲ್‌ನಲ್ಲಿ ನಡೆದ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್'ನ 2022-23ನೇ ಸಾಲಿನ ಪರೀಕ್ಷಾ ಮೌಲ್ಯಮಾಪನ
ಮೂಳೂರು: ಇಸ್ಲಾಮಿಕ್ ಎಜುಕೇಶನ್‌ಲ್ ಬೋರ್ಡ್ ನಡೆಸಿದ 2022-23ನೇ ಸಾಲಿನ 5,7,10,12 ತರಗತಿಗಳ ಮೌಲ್ಯಮಾಪನವು ಉಡುಪಿ ಜಿಲ್ಲೆಯ ಮೂಳೂರು ಜುಮ್ಮಾ ಮಸ್ಜಿದ್‌ನ ಅಧೀನದಲ್ಲಿರುವ ಸಿರಾಜುಲ್ ಇಸ್ಲಾಂ ಅರಬಿ ಮದ್ರಸ ಹಾಲ್‌ನಲ್ಲಿ ಮಂಗಳವಾರ ನಡೆಯಿತು.
ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮೀತಿಯ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಎಸ್ ಜೆ ಎಂ ಉಡುಪಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಝಾಕ್ ಕಾಸಿಮಿಯವರು ಸಭೆಯನ್ನು ಉದ್ಘಾಟಿಸಿದರು.
ಡಿವಿಜನ್ ಕಂಟ್ರೋಲರಾದ ಹಾಫಿಲ್ ಹನೀಫ್ ಮಿಸ್ಬಾಯಿಯವರು ವಿಷಯ ಮಂಡಿಸಿದರು. ಸಿರಾಜುಲ್ ಇಸ್ಲಾಂ ಅರಬಿ ಮದರಸ ಮೂಳೂರು ಇದರ ಅಧ್ಯಕ್ಷರಾದ ವೈಬಿಸಿ ಅಹಮದ್ ಬಾವ, ಕಾರ್ಯದರ್ಶಿ ಅಮೀರ್ ಅಹ್ಮದ್, ಕೋಶಾಧಿಕಾರಿ ಉಮರ್ ಮೌದಿನ್ ಸ್ಥಳೀಯ ಮುಖಂಡರಾದ ಹಾಜಿ ಅಬ್ಬು ಮೊಹಮ್ಮದ್, ಹಮೀದ್ ಯೂಸುಫ್, ಬೋರ್ಡ್ ಮುಫತ್ತಿಶ್ ಹಸನ್ ಸಖಾಫಿ, ಎಸ್ ಜೆ ಎಂ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್ ಜೆ ಎಂ ಜಿಲ್ಲಾ ಕಾರ್ಯದರ್ಶಿ ಅಮಿರ್ ಖಾನ್ ಅಹ್ಸನಿ ಸ್ವಾಗತಿಸಿ, ಅಬ್ದುಲ್ ಲತೀಫ್ ಸಅದಿ ಮೂಳೂರು ಧನ್ಯವಾದವಿತ್ತರು.