ಹಲಾಲ್ ಕಟ್-ಜಟ್ಕಾ ಕಟ್ ಬಗ್ಗೆ ಮತ್ತೆ ಮಾತನಾಡಿದ ಪ್ರಮೋದ್ ಮುತಾಲಿಕ್ !
ಮಂಗಳೂರು: ಮತ್ತೆ ಹಲಾಲ್ ಕಟ್ ವಿಷಯ ಮುನ್ನೆಲೆಗೆ ಬಂದಿದೆ. ಜಟ್ಕಾ ಕಟ್ ಮುಂದುವರಿಸಿ-ಹಲಾಲ್ ಕಟ್ ಬಹಿಷ್ಕಾರ ಮಾಡಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಯುಗಾದಿ ಸಂದರ್ಭದಲ್ಲಿ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡಿದ್ದೇವು, ಈ ವರ್ಷವೂ ಅಭಿಯಾನ ಮುಂದುವರಿಯಲಿದೆ ಎಂದರು.
ಹಲಾಲ್ ಎಂಬುವುದು ಇಸ್ಲಾಂನದ್ದು, ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಹಾಲಾಲ್ನಿಂದ ಜಲಾಮ್-ಉಲೇಮಾ ಟ್ರಸ್ಟ್ಗೆ 2 ಲಕ್ಷ ಕೋಟಿ ಆದಾಯವಿದೆ ಎಂದ ಮುತಾಲಿಕ್, ಈ ದುಡ್ಡು ಎಲ್ಲಿ ಖರ್ಚು ಆಗುತ್ತಿದೆ? ಹಲಾಲ್ನ ದುಡ್ಡು ಉಗ್ರಗಾಮಿಗಳಿಗೆ ಸಂದಾಯವಾಗುತ್ತದೆ ಎಂದು ಆರೋಪ ಮಾಡಿದರು.
ಈ ಹಿಂದೆ ಹಿಜಾಬ್ ಬ್ಯಾನ್ ವೇಳೆ ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿಗೆ ಈ ಟ್ರಸ್ಟ್ 5 ಲಕ್ಷ ರೂಪಾಯಿ ನೀಡಿದ್ದು, ರಾಜ್ಯದಲ್ಲಿ ನಡೆದ ಗಲಭೆಯ ಹಿಂದೆ ಹಲಾಲ್ನ ಹಣವಿದೆ ಎಂದರು.
ಸುನಿಲ್ ಕುಮಾರ್ ವಿರುದ್ಧ ಕಿಡಿ...
ಸಚಿವ ಸುನೀಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಮುತಾಲಿಕ್, ಅವರು ಇಂದು ಉನ್ನತ ಸ್ಥಾನಕ್ಕೇರಲು ಕೇಸರಿ ಶಾಲು, ಹಿಂದುತ್ವವೇ ಕಾರಣ. ಸುನೀಲ್ ಕುಮಾರ್ಗೆ ನಾಚಿಕೆ ಮಾನ ಮರ್ಯಾದೆ ಎಂಬುದೇ ಇಲ್ಲ, ಹಿಂದುತ್ವ ಅಂದ್ರೆ ಬೇನಾಮಿಯಾಗಿ ದುಡ್ಡು ಮಾಡೋದು, ಸೊಕ್ಕು ತೊರಿಸೋದು ಅಲ್ಲ. ಸುನೀಲ್ ಕುಮಾರ್ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ, ಮುಂದೆ ಎಲ್ಲವನ್ನು ಅನುಭವಿಸುತ್ತೀರಿ ಎಂದು ಗುಡುಗಿದರು.