ಕಾಪು ವಿಧಾನಸಭಾ ಚುನಾವಣೆ ಪ್ರಚಾರ ಹಿನ್ನೆಲೆ: ಚುನಾಯಿತ SDPI ಪುರಸಭೆ, ಗ್ರಾಮ ಪಂಚಾಯತ್ ಸದಸ್ಯರ ಸಭೆ
ಕಾಪು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ವಿಧಾನಸಭಾ ಕ್ಷೇತ್ರದ ಚುನಾಯಿತ ಪುರಸಭೆ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಕಾಪು ವಿಧಾನಸಭಾ ಚುನಾವಣೆ ಪ್ರಚಾರ ಸಭೆ ಕಾಪು ಕ್ಷೇತ್ರ ಕಚೇರಿಯಲ್ಲಿ ನಡೆಯಿತು.
ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಅಲಿ ಈ ಸಂದರ್ಭದಲ್ಲಿ ಚುನಾಯಿತ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತಾನಡಿ, 2023 ಸಾಲಿನಲ್ಲಿ ನಡೆಯುವ ಚುನಾವಣೆ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳ ಬಗ್ಗೆ ಅರಿತು ಎಸ್ ಎಸ್ ಡಿ ಪಿ ಐ ಕಾಪು ಕ್ಷೇತ್ರ ಅಭ್ಯರ್ಥಿ ಹನೀಫ್ ಮೂಳೂರು ರವರ ಪರವಾಗಿ ಚುನಾವಣೆ ಪ್ರಚಾರ ಹಾಗೂ ನಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮತದಾರ ಬಂಧುಗಳಲ್ಲಿ ಅರಿವು ಮೂಡಿಸಬೇಕೆಂದು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಅದಲ್ಲದೆ ಬಿಜೆಪಿ ಸರಕಾರವು ಮುಸ್ಲಿಂ 2B ಮೀಸಲಾತಿಯನ್ನೂ ರದ್ದತಿ ಮಾಡಿದನ್ನು ಕುರಿತು ಜನಪ್ರತಿನಿಧಿಗಳೊಟ್ಟಿಗೆ ಚರ್ಚಿಸಿ ಮುಸ್ಲಿಂ ಸಮುದಾಯಕ್ಕೆ 2B ಯ ಅರಿವು ಮೂಡಿಸಿ ಮುಂಬರುವ ದಿನಗಳಲ್ಲಿ ಕಾಪು ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುದೆಂದು ತೀರ್ಮಾನಿಸಿಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಚುನಾವಣಾ ಉಸ್ತುವಾರಿಯಾದ ರಝಕ್ ವೈ ಎಸ್ ಹಾಗೂ ಕಾಪು ಕ್ಷೇತ್ರ ಅಧ್ಯಕ್ಷರಾದ ಹನೀಫ್ ಮೂಳೂರು, ಪುರಸಭೆ ಸದಸ್ಯರು ನೂರುದ್ದೀನ್, ಸರಿತಾ ಶಿವಾನಂದ್, ವಾಹಿದ ಶರೀಫ್, ಎಸ್ ಡಿ ಪಿ ಐ ಬೆಂಬಲಿತ ಗ್ರಾ ಪಂ ಸದಸ್ಯರುಗಳಾದ ಆಸೀಫ್ ವೈ ಸಿ, ಮಜೀದ್ ಹಸನ್, ರುಮಾನ ನವಾಜ್, ನಫೀಜ್ ಬಾನು, ರುಬಿನ ಶಾಬನ್, ನಿಹಾನಾ ಪರ್ವಿನ್ ಜಲಾಲ್, ಇರ್ಫಾನ್ ಮುಂತಾದರೂ ಉಪಸ್ಥಿತರಿದ್ದರು.