ಶಿರ್ವ ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೇರಣಾ ಶಿಬಿರ ನಡೆಸಿಕೊಟ್ಟ ರಫೀಕ್ ಮಾಸ್ಟರ್
ಶಿರ್ವ: ಇಲ್ಲಿನ ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ಪ್ರೇರಣಾ ಶಿಬಿರವು ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಅವರ ನೇತೃತ್ವದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಯಾವ ರೀತಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು, ಮುಂದೆ ಬರುವ ಪಬ್ಲಿಕ್ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬ ಕುರಿತು ಉತ್ತಮ ರೀತಿಯಲ್ಲಿ ರಫೀಕ್ ಮಾಸ್ಟರ್ ಅವರು ಪ್ರೇರಣೆ ನೀಡಿರು.
ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಿ ಹೆಚ್ಚಿನ ಅಂಕ ಗಳಿಕೆಗೆ ಬೇಕಾದ ಕೌಶಲಗಳನ್ನು ರೂಪಿಸುವುದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರೇರಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಮಾಜಿ ಅಧ್ಯಕ್ಷರಾದ ಮಮ್ತಾಜ್ ಅಲಿಯವರು ವಹಿಸಿದ್ದರು. ಡಾ.ಅಪ್ಸರಿ ಬಾನು ಉಡುಪಿ, ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಜ್ಯೋತಿ ಶೆಟ್ಟಿಗಾರ್, ಕನ್ನಡ ಶಿಕ್ಷಕಿ ಉಷಾ ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೇರಣಾ ಶಿಬಿರದಲ್ಲಿ ವಿದ್ಯಾರ್ಥಿಗಳ ಜೊತೆ ಅವರ ಪೋಷಕರು ಕೂಡ ಭಾಗವಹಿಸಿದ್ದರು.