ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ನಿನಗೆ ಎಷ್ಟು ಕೋಟಿ ರೂ.ಬಂತು?ಎಷ್ಟು ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ?: ಪ್ರತಾಪ್ ಸಿಂಹ ವಿರುದ್ಧ ಎಚ್. ವಿಶ್ವನಾಥ್ ಪ್ರಶ್ನೆ

ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ನಿನಗೆ ಎಷ್ಟು ಕೋಟಿ ರೂ.ಬಂತು?ಎಷ್ಟು ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ?: ಪ್ರತಾಪ್ ಸಿಂಹ ವಿರುದ್ಧ ಎಚ್. ವಿಶ್ವನಾಥ್ ಪ್ರಶ್ನೆ

ಮೈಸೂರು: ಬೆಂಗಳೂರು-ಮೈಸೂರು ಹೈವೇ ನಿರ್ಮಾಣಕ್ಕೆ ಸಂಬಂಧಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ BJP ಎಂಎಲ್ ಸಿ ಎಚ್. ವಿಶ್ವನಾಥ್ ಗಂಭೀರ ಆರೋಪದ ಜೊತೆಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ನೀನು ಎಷ್ಟು ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ? ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ನಿನಗೆ ಎಷ್ಟು ಕೋಟಿ ಬಂತು? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುದಿಲ್ಲ ಅಂದುಕೊಂಡಿದ್ದೀಯ ? ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. 

ರಾಜಕೀಯಕ್ಕೆ ಬಂದು ನನಗೆ 50 ವರ್ಷ ಆಗಿದ್ದು, ನನ್ನ ಮನೆ ಹೇಗಿದೆ ನೋಡಿ? ನೀನು ನಿನ್ನೆ ಬಂದವ ನಿನ್ನ ಮನೆ ಹೇಗಿದೆ? ಎಷ್ಟು ಕೋಟಿ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ ಎಂಬುದನ್ನು ಬಹಿರಂಗಪಡಿಸುವಂತೆ ವಿಶ್ವನಾಥ್ ಸವಾಲು ಹಾಕಿದರು.

ಎಕ್ಸ್​ಪ್ರೆಸ್​ ಹೈವೇ ಕಾಮಗಾರಿ ನಿರ್ಮಾಣಕ್ಕೆ ಜಲ್ಲಿಕಲ್ಲು, ಮರಳು ಸರಬರಾಜು ಮಾಡಿದವರು ನಿಮ್ಮ ಸ್ನೇಹಿತರಲ್ಲವೇ? ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ ಎಂದು ಪ್ರಶ್ನಿಸಿರುವ ವಿಶ್ವನಾಥ್, ನಾಚಿಕೆ ಮಾನ ಮರ್ಯಾದೆ ಯಾವುದೂ  ಪ್ರತಾಪ್ ಸಿಂಹನಿಗೆ ಇಲ್ಲ. ಇವರು ಉರಿಗೌಡ, ನಂಜೇಗೌಡ ಹೆಸರು ಹೇಳಿಕೊಂಡು ಈಗ ರಾಜಕೀಯ ಮಾಡುತ್ತಿದ್ದಾರೆ. ಎಲ್ಲ ವಿಷಯದಲ್ಲೂ ರಾಜಕೀಯ ಮಾಡುವ ಇಂಥವರಿಗೆ ಏನನ್ನಬೇಕು? ಎಂದರು.

ಬೆಂಗಳೂರು- ಮೈಸೂರು ಹೈವೇಯನ್ನು ಪ್ರಧಾನಿ ಮೋದಿ, ಪ್ರತಾಪ್ ಸಿಂಹ ಅಪ್ಪನ ಮನೆಯಿಂದ ಹಣ ತಂದು ನಿರ್ಮಾಣ ಮಾಡಿಲ್ಲ‌, ಈ ಹಣ ಜನರ ತೆರಿಗೆಯದ್ದು, ಆದರೂ ಹೈವೇಗೆ ದುಬಾರಿ ಟೋಲ್ ನಿಗದಿ ಮಾಡಿರೋದಕ್ಕೆ ವಿಶ್ವನಾಥ್ ಕಿಡಿಕಾರಿದರು.

ಉದ್ಘಾಟನೆಗೊಂಡಿರುವ ಬೆಂಗಳೂರು ಮೈಸೂರು ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದೆ. ಈ ಹೈವೇ ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಜನರಿಗೆ ತೀವ್ರ ತೊಂದರೆಯಾಗಿದ್ದು, ಹೈವೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪ್ರಧಾನಿ ನರೇಂದ್ರಮೋದಿ ಬಂದು ಉದ್ಘಾಟನೆ ಮಾಡಿದಕ್ಕೆ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article