ಎಪ್ರಿಲ್ 22ರಂದು ದುಬೈನಲ್ಲಿ ನಡೆಯಲಿದೆ "ದುಬೈ ಬಿಲ್ಲವೋತ್ಸವ"; ದಿನವಿಡೀ ನಡೆಯಲಿದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ದುಬೈ: ಯುಎಇಯ ಎಲ್ಲಾ ರಾಜ್ಯದಲ್ಲಿ ಇರುವ 'ನಮ್ಮಿ ಬಿಲ್ಲವ' ಸಮಾಜದ ಬಾಂದವರು ಎಪ್ರಿಲ್ 22 ರಂದು ದುಬೈನಲ್ಲಿ ನಡೆಯಲಿರುವ "ದುಬೈ ಬಿಲ್ಲವೋತ್ಸವ"ದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬಿಲ್ಲವಾಸ್ ಫ್ಯಾಮಿಲಿ ದುಬೈಯ ಅಧ್ಯಕ್ಷ ಪ್ರಭಾಕರ ಸುವರ್ಣ ಮನವಿ ಮಾಡಿದ್ದಾರೆ.
ದುಬೈಯ ಊದ್ ಮೇತದ 'ಬಿರಿಯಾನಿ 2020' ರೆಸ್ಟೋರೆಂಟ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವಾಸ್ ಫ್ಯಾಮಿಲಿ ದುಬೈಯ 25 ನೇ ವರ್ಷದ ಬೆಳ್ಳಿ ಹಬ್ಬಕ್ಕೆ ರೇಣುಕ ಮಠದ ಸೋಲೂರು ಶ್ರೀಶ್ರೀಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಆಗಮಿಸಿ ನಮ್ಮನ್ನು ಉದ್ದೇಶಿಸಿ ಆರ್ಶಿವಚನ ಮಾಡಲಿದ್ದಾರೆ ಹಾಗೂ ಎಪ್ರಿಲ್ 22 ರಂದು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ತಿಳಿಸಿದರು.
ಬಿಲ್ಲವಾಸ್ ಫ್ಯಾಮಿಲಿ ದುಬೈಯ ಕಾರ್ಯದರ್ಶಿ ದೀಪಕ್ ಎಸ್.ಪಿ. ಮಾತನಾಡಿ, ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಬಿಲ್ಲವಾಸ್ ಫ್ಯಾಮಿಲಿ ದುಬೈಯ ಸ್ನೇಹ ಸಮ್ಮಿಲನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿದ್ವಾನ್ ಸುರೇಶ್ ಅತ್ತಾವರ್ ಇವರ ನಿರ್ದೇಶನದಲ್ಲಿ " ಬಿರುವ ಬೊಲ್ಲಿಲು" ಎಂಬ ತುಳು ನೃತ್ಯ ರೂಪಕ, ಬಿರುವೆರ್ ಕುಡ್ಲ ದುಬೈ ತಂಡದವರಿಂದ "ಬಿರ್ದುದ ಪಿಲಿಕುಲು"(ಪಿಲಿನಲಿಕೆ) ಮತ್ತು ತೆಲಿಕೆದ ತೆನಾಲಿ ಸುನೀಲ್ ನೆಲ್ಲಿಗುಡ್ಡೆಯವರ ನೇತೃತ್ವದಲ್ಲಿ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ " ಗಮ್ಜಲ್ ಕಾಮಿಡಿ" ಎಂಬ ಹಾಸ್ಯ ಕಾರ್ಯಕ್ರಮ ಜರಗಲಿದೆ.
ಕುಡ್ಲ ಕುಸಲ್ ರವಿರಾಮ ರಾಮಕುಂಜ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ, ಕುಸಾಲ್ದ ಗುರಿಕಾರೆ ಸುಜಿತ್ ಕೋಟ್ಯಾನ್, ಹರೀಶ್ ಬಂಗೆರ, ಸಂಗೀತ ನಿರ್ದೇಶಕ ಶುಭಕರ ಬೆಳಪುರವರು ಊರಿಂದ ಆಗಮಿಸಲಿದ್ದು ನಮ್ಮನೆಲ್ಲ ಮನರಂಜಿಸಲಿದ್ದರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಲ್ಲವಾಸ್ ಫ್ಯಾಮಿಲಿ ದುಬೈಯ ನಿಕಟ ಪೂರ್ವ ಅಧ್ಯಕ್ಷ ಸತೀಶ್ ಪೂಜಾರಿ, ನಿಕಟ ಪೂರ್ವ ಉಪಾಧ್ಯಕ್ಷ ಆನಂದ ಬೈಲೂರು, ಹಾಲಿ ಉಪಾಧ್ಯಕ್ಷ ಸತೀಶ್ ಉಳ್ಳಾಲ್, ಪ್ರಕಾಶ್ ಪೂಜಾರಿ, ಕೋಶಾಧಿಕಾರಿ ಪ್ರಭಾಕರ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ರವಿ ಕೋಟ್ಯಾನ್ ಉಪಸ್ಥಿತರಿದ್ದರು.
✒️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)