ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನಿಂದ ಇಫ್ತಾರ್ ಕೂಟ
ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ (BWF) ವತಿಯಿಂದ ಶುಕ್ರವಾರ ಬೃಹತ್ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ಸಾಮಾಜಿಕ ಧುರೀಣ, ಸಂಸ್ಥೆ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಹಾಗೂ ಪ್ರಧಾನ ಕಾರ್ಯದರ್ಶಿ, ಅನಿವಾಸಿ ಉದ್ಯಮಿ ಅಬ್ದುಲ್ಲಾ ಮದುಮೂಲೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟಕ್ಕೆ ಸುಮಾರು 600ಕ್ಕಿಂತಲೂ ಹೆಚ್ಚು ಬ್ಯಾರೀ ಸಮುದಾಯದ ಯುವಕರೂ, ಪುರುಷರು,ಮಹಿಳೆಯರು,ಮಕ್ಕಳು ಸಾಕ್ಷಿಯಾದರು.
ಆರಂಭದಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಪ್ರತಿನಿಧಿ ಅಬ್ದುಲ್ ಮುಜೀಬ್ ಉಚ್ಚಿಲ ಕಿರಾಅತ್ ಪಠಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಕೆ.ಎಂ ಮುಸ್ತಫಾ ನಯೀಮಿ ಹಾವೇರಿ ಉಸ್ತಾದರು ನೆರೆದಿದ್ದ ಸಮೂಹಕ್ಕೆ ಮೌಲ್ಯಯುತ ಧಾರ್ಮಿಕ ಸಂದೇಶವನ್ನು ಸಾರಿದರು.
ಅಬೂ ಸುಫಿಯಾನ್ (ಎಚ್.ಎ. ಇಬ್ರಾಹಿಂ ಮದನಿ) ಉಸ್ತಾದರು ಇಫ್ತಾರ್ ಸಂದೇಶವನ್ನು ನೀಡಿದರು. ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ವಿವರಿಸಿ , BWF ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಜೀವ ಕಾರುಣ್ಯ ಚಟುವಟಿಕೆಗಳ ಕಿರು ಪರಿಚಯ ನೀಡಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ರಮದಾನ್ ಸಂದೇಶ ನೀಡಿದರು. ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರವೂಫ್ ಹಾಜಿ ಕೈಕಂಬರವರು ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜಲೀಲ್ ಬಜ್ಪೆಯವರು “ ಬಿಡಬ್ಲ್ಯೂಫ್ ನಡೆದು ಬಂದ ದಾರಿ “ ಎಂಬ ಕಿರು ಮಾಹಿತಿ ಈ ಸಂದರ್ಭದಲ್ಲಿ ಪ್ರದರ್ಶಿಸಿದರು .
BWF ಪ್ರತಿನಿಧಿ ಅಬ್ದುಲ್ ರಶೀದ್ ವಿ.ಕೆ ಧನ್ಯವಾದವಿತ್ತರು. BWFನ ಪದಾಧಿಕಾರಿಗಳಾದ ಹಂಝ ಕಣ್ಣಗಾರ್ ,ಮೊಹಮ್ಮದ್ ಕಲ್ಲಾಪು ,ಹಮೀದ್ ಗುರುಪುರ , ಇಮ್ರಾನ್ ಕುದ್ರೋಳಿ, ನವಾಜ್ ಉಚ್ಚಿಲ್, ಜಲೀಲ್ ಬಜ್ಪೆ, ಹನೀಫ್ ಉಳ್ಳಾಲ್, ಸಿರಾಜುದ್ದೀನ್ ಪಾರಲಡ್ಕ, ಅಬ್ದುಲ್ ಮಜೀದ್, ಮಜೀದ್ ಆತೂರ್, ಬಷೀರ್ ಬಜ್ಪೆ, ಇರ್ಫಾನ್ ಕುದ್ರೋಳಿ, ಬಷೀರ್ ಉಚ್ಚಿಲ್, ಮೊಯಿನುದ್ದೀನ್ ಹಂಡೇಲ್, ಇಮ್ರಾನ್ ಕೃಷ್ಣಾಪುರ, ನಜಿರ್ ಉಬರ್, ನಿಜಾಮುದ್ದೀನ್ ವಿಟ್ಲ, ಯಾಹ್ಯಾ ಕೊಡ್ಲಿಪೇಟ್, ರಶೀದ್ ಬಿಜೈ ಮತ್ತು ಇತರ ಸ್ವಯಂ ಸೇವಕರು ಈ ಇಫ್ತಾರ್ ಕಾರ್ಯಕ್ರಮದ ಯಶಸ್ವಿಗಾಗಿ ಅಹರ್ನಿಶಿ ದುಡಿದ್ದಿದ್ದರು.