ಗುರುಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ 'ಕೈ'ಹಿಡಿದ ಬಿಜೆಪಿ ಮುಖಂಡರು
Saturday, April 22, 2023
ಗುರುಪುರದ ಮೆಗಾ ಪ್ಲಾಜಾ ಹಾಲ್‌ನಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಇನಾಯತ್ ಅಲಿ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಾರಿಕಾ ಅವಿನಾಶ್ ಪೂಜಾರಿ, ವಿನೋದ್ ಪೂಜಾರಿ, ಆನಂದ್ ಬಂಗೇರ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾದರು.
ಅವರನ್ನು ಇನಾಯತ್ ಅಲಿ ಸ್ವಾಗತಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಆರ್‌ಕೆ ಪೃಥ್ವಿರಾಜ್, ಪುರಷೋತ್ತಮ್ ಚಿತ್ರಾಪುರ, ಸುರೇಂದ್ರ ಕಂಬ್ಲಿ, ಗಿರೀಶ್ ಆಳ್ವ, ನೀರುಮಾರ್ಗ ಗ್ರಾಪಂ ಅಧ್ಯಕ್ಷೆ ಧನವಂತಿ, ಅಬ್ದುಲ್ ಮಜೀದ್ ಸುರಲ್ಪಾಡಿ, ಎಸ್‌ವಿ ಅಮಿನ್,ಕೃಷ್ಣಾ ಅಮಿನ್, ಅಬ್ದುಲ್ ಅಜೀಜ್ ಪಾಷ, ಪದ್ಮನಾಭ ಕೊಟ್ಯಾಯನ್ ಅವರು ಸೇರಿದಂತೆ ಹಲವರು ಇದ್ದರು.