
ಪೊಲ್ಯ, ಭಾಸ್ಕರನಗರ, ಸುಭಾಸ್ ರೋಡ್, ಮೂಳೂರು, ಎರ್ಮಾಳ್ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬ ಆಚರಣೆ
ಉಚ್ಚಿಲ: ಪೊಲ್ಯ, ಭಾಸ್ಕರನಗರ, ಸುಭಾಸ್ ರೋಡ್, ಮೂಳೂರು, ಎರ್ಮಾಳ್ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಶನಿವಾರ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಇಲ್ಲಿನ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಲಾಯಿತು.
ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿದರು. ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.
ಇಲ್ಲಿನ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.
ಪೊಲ್ಯ ಮಸೀದಿಯಲ್ಲಿ ಈದುಲ್ ಫಿತ್ರ್...
ಪೊಲ್ಯ ಹಿಮಾಯತುಲ್ ಇಸ್ಲಾಂ ಜುಮ್ಮಾ ಮಸೀದಿಯೆಯಲ್ಲಿ ನಡೆದ ಈದುಲ್ ಫಿತ್ರ್ ನಮಾಜ್ ವೇಳೆ ಖತೀಬರಾದ ಅಲಿ ಮದನಿ ಅವರು, ಈದುಲ್ ಫಿತ್ರ್ ಹಬ್ಬ ನಮ್ಮನ್ನು ಪರಸ್ಪರ ಗೌರವಿಸಿಕೊಂಡು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಲು ಪ್ರೇರಣೆ ನೀಡುತ್ತದೆ. ಈ ನಾವು ಇತರರೊಂದಿಗೆ ಅಸೂಯೆ, ದ್ವೇಷ ಎಲ್ಲವನ್ನು ಮರೆತು ಒಂದಾಗಿ ಬಾಳುವಂತಾಗಬೇಕು. ಈ ಹಬ್ಬವು ನಮ್ಮಲ್ಲಿ ಶಾಂತಿ, ಸೌಹಾರ್ಧತೆ, ಧಾರ್ಮಿಕ ಚೌಕಟ್ಟಿನೊಳಗೆ ಎಲ್ಲರೂ ಸಾಗುವಂತೆ ಸಂದೇಶವನ್ನು ನೀಡುತ್ತದೆ ಎಂದರು.
ಇದೇ ವೇಳೆ ರಮದಾನಿನಲ್ಲಿ ನಡೆದ "ಕಲಿಯಿರಿ - ಕಲಿಸಿರಿ ಕಂಟೆಸ್ಟ್-23" ಇದರ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಮಸೀದಿಯ ಸದರ್ ಮುಅಲ್ಲಿಮರಾದ ಇಲ್ಯಾಸ್ ಅಲ್ ವಾರಿಸಿ, ಅಧ್ಯಕ್ಷ ಅಲಿಯಬ್ಬ, ಉಪಾಧ್ಯಕ್ಷ ಹಸನ್ ಮುನ್ನಾಕ, ಗೌರವಾಧ್ಯಕ್ಷ ಹಾತೀಮ್ ಶೈಕ್. ಹನೀಫ್ ಪೊಲ್ಯ, ರಫೀಕ್ ಪಯ್ಯಾರ್, ಮಜೀದ್ ಬಿರಾಲಿ, ಇಬ್ರಾಹಿಂ ಕೆ.ಹೆಚ್, ಅದೇ ರೀತಿ ಪೊಲ್ಯನ್ಸ್ ಫೌಂಡೇಶನ್ ಸದಸ್ಯರಾದ ರಮೀಝ್, ಮುಹಮ್ಮದ್ ಶಫಿ, ಮುಝಮ್ಮಿಲ್ ಹಾಜರಿದ್ದರು.