ಸಿಹಿ ಹಂಚಿ ಹಬ್ಬ ಆಚರಿಸಿದ ಕಾಪು ಜಮಾಅತೆ ಇಸ್ಲಾಮೀ ಹಿಂದ್

ಸಿಹಿ ಹಂಚಿ ಹಬ್ಬ ಆಚರಿಸಿದ ಕಾಪು ಜಮಾಅತೆ ಇಸ್ಲಾಮೀ ಹಿಂದ್

ಕಾಪು: ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲವು, ಕಾಪು ಪೊಲೀಸ್ ವ್ರತ್ತ ನಿರೀಕ್ಷಕ ಕಚೇರಿಯಿಂದ ಹಿಡಿದು, ಕಾಪು ಪೊಲೀಸ್ ಠಾಣೆಯ ತನಕ ಇರುವ ಎಲ್ಲಾ ದೇಶ ಬಾಂಧವರ ಅಂಗಡಿಗಳಿಗೆ ತೆರಳಿ ಮತ್ತು ರಿಕ್ಷಾ ಚಾಲಕರಿಗೆ ಸಿಹಿ ತಿಂಡಿಯನ್ನು ವಿತರಿಸಿ  ಪ್ರೀತಿ ಭಾತ್ರತ್ವ ಖಾಯಂ ಗೊಳಿಸುವ ನಿಟ್ಟಿನಲ್ಲಿ ಹಬ್ಬವನ್ನು ಸ್ಮರಣೀಯವನ್ನಾಗಿಸಿತು.

ಸೌಹಾರ್ದತ್ವ ಕ್ಕೆ ಇದೊಂದು ಉತ್ತಮ ಹೆಜ್ಜೆ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು. ತಂಡದಲ್ಲಿ ಸ್ಥಾನೀಯ ಅಧ್ಯಕ್ಷರು ಅನ್ವರ್ ಅಲಿ, ಮುಹಮ್ಮದ್ ಅಲಿ, ಸಯ್ಯದ್ ಇರ್ಷಾದ್, ಅನೀಸ್ ಅಲಿ, ಮುಯೀಸ್, ಆರ್ಹಾನ್ , ಸೈಫ್, ಅಕ್ಬರ್,ಮುಹಮ್ಮದ್ ಅವ್ವಾಬ್ ಉಪಸ್ಥಿತರಿದ್ದರು.Ads on article

Advertise in articles 1

advertising articles 2

Advertise under the article