ಹೂಡೆ ಸಮೀಪದ ಕುಕ್ಕುಡೆ ಕುದ್ರುವಿನಲ್ಲಿ ನಡೆದ ದೋಣಿ ದುರಂತ; ಮೂವರ ಮೃತದೇಹ ಪತ್ತೆ; ಓರ್ವನ ಮೃತದೇಹಕ್ಕಾಗಿ ಮುಂದುವರಿದ ಹುಡುಕಾಟ
Sunday, April 23, 2023
ಉಡುಪಿ: ಹೂಡೆ ಸಮೀಪದ ಕುಕ್ಕುಡೆ ಕುದ್ರುವಿನಲ್ಲಿ ಮರುವಾಯಿ ಹೆಕ್ಕಲು ಹೋಗಿದ್ದ ವೇಳೆ ದೋಣಿ ಮಗುಚಿ ಬಿದ್ದು, 4 ಮಂದಿ ಮೃತಪತ್ತಿದ್ದು, ಮೂವರ ಮೃತದೇಹ ಪತ್ತೆಯಾಗಿದ್ದು, ನೀರುಪಾಲಾದ ಓರ್ವನ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದೆ.
ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ಈ ದುರಂತ ಸಂಭವಿಸಿದ್ದು, ದೋಣಿಯಲ್ಲಿ ಒಟ್ಟು 7 ಮಂದಿ ಇದ್ದರೆಂದು ಹೇಳಲಾಗಿದೆ. ಅದರಲ್ಲಿ ಮೂವರು ಈಜಿ ಕೊಂಡು ದಡ ಸೇರಿದ್ದಾರೆ. ಮೃತರನ್ನು ಹೂಡೆಯ ನಿವಾಸಿ ಟೈಲರ್ ಫಾರೂಕ್ ಪುತ್ರ ಫೈಝಾನ್ ಹಾಗೂ ಅವರ ಸಹೋದರಿಯ ಪುತ್ರ ಇಬಾದ್ ಹಾಗು ಸುಫಾನ್, ಫರ್ಹಾನ್ ಎಂದು ಗುರುತಿಸಲಾಗಿದೆ.
ಈದ್ ಹಬ್ಬಕ್ಕಾಗಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದು, ಅಲ್ಲಿಂದ ಒಟ್ಟು 7 ಮಂದಿ ಮರುವಾಯಿ ಹೆಕ್ಕಲೆಂದು ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ನಡೆದಿದೆ.