ಕನ್ನಡ ಪಾಠ ಶಾಲೆ ದುಬೈನ 9ನೇ ವರ್ಷದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ
ದುಬೈ(Headlines Kannada): ಕನ್ನಡ ಮಿತ್ರರು ಯು.ಎ .ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈನ 9ನೇ ವರ್ಷದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಸಂಸ್ಥೆಯ ಮಹಾಪೋಷಕರಾದ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಮೋಹನ್ ನರಸಿಂಹಮೂರ್ತಿ ಅವರು ಫಾರ್ಚುನ್ ಎಟ್ರಿಯಂ ಹೋಟೆಲಿನಲ್ಲಿ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ಸಿದ್ದಲಿಂಗೇಶ್, ಕಾರ್ಯದರ್ಶಿ ಸುನಿಲ್ ಗವಾಸ್ಕರ್, ಜಂಟಿ ಕಾರ್ಯದರ್ಶಿ ಶಿವಶರಣಪ್ಪ ಮೇಟಿ, ಖಜಾಂಜಿ ನಾಗರಾಜ್ ರಾವ್ ಉಡುಪಿ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ವಿಜಯ್ ಕುಮಾರ್, ಗುರು ಪ್ರಶಾಂತ್ ಇವರ ಸಮ್ಮುಖದಲ್ಲಿ ನೆರವೇರಿಸಿದರು.
ಈ ವರ್ಷದ ಕನ್ನಡ ಮಿತ್ರ -2023 ಪ್ರಶಸ್ತಿಗೆ ಆಯ್ಕೆಯಾದವರು
ಹುಚ್ಚಮ್ಮ ಬಸಪ್ಪ ಚೌದ್ರಿ(ಕನ್ನಡ ಶಾಲೆಗೆ ತಮ್ಮ ಪೂರ್ಣ ಆಸ್ತಿಯನ್ನ ದಾನ ಮಾಡಿದ ಕೊಡುಗೈ ದಾನಿ)
ರಜನಿ ಕೃಷ್ಣ ರಾವ್, (ಕನ್ನಡ ಭಾಷಾ ಶಬ್ದ ಶಾಸ್ತ್ರ ತಜ್ಞೆ)
ಇವರಿಗೆ ದುಬೈನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಮತ್ತು ನಗದು ನೀಡಿ ಪುರಸ್ಕರಿಸಲಾಗುವುದು.
ಈ ಕಾರ್ಯಕ್ರಮವನ್ನು ಪಾಠ ಶಾಲೆಯ ಮಕ್ಕಳು ಮತ್ತು ಶಿಕ್ಷಕಿಯರು ನೆಡೆಸಿಕೊಡಲಿದ್ದು, ಮುಖ್ಯ ಅತಿಥಿಯಾಗಿ ಕನ್ನಡ ನಾಡಿನ ಪ್ರಸಿದ್ಧ ಶಿಕ್ಷಣ ಕ್ಷೇತ್ರದ ಭೀಷ್ಮ ಎಂದೇ ಹೆಸರಾದ ಗೌರವಾನ್ವಿತ ಮೋಹನ್ ಆಳ್ವ ರವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಿಗರಿಗೆ ಮುಕ್ತ ಆಹ್ವಾನವಿದ್ದು , ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಕೋರಿಕೆ.