ಕರ್ಜೆಯಿಂದ ಬ್ರಹ್ಮಾವರದ ವರೆಗೆ ಬ್ಲಾಕ್ ಕಾಂಗ್ರೆಸ್'ನ ಮನಮೋಹಕ ಬೈಕ್ ರಾಲಿ; ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಚಾಲನೆ

ಕರ್ಜೆಯಿಂದ ಬ್ರಹ್ಮಾವರದ ವರೆಗೆ ಬ್ಲಾಕ್ ಕಾಂಗ್ರೆಸ್'ನ ಮನಮೋಹಕ ಬೈಕ್ ರಾಲಿ; ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಚಾಲನೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಶನಿವಾರ ಬ್ರಹ್ಮಾವರದಲ್ಲಿ ಬೃಹತ್ ರಾಲಿಗೆ ಚಾಲನೆಯನ್ನು ನೀಡಿದರು.ಕರ್ಜೆಯಿಂದ ಬ್ರಹ್ಮಾವರದ ವರೆಗೆ ಒಟ್ಟು 3 ಸಾವಿರಕ್ಕಿಂತಲೂ ಮಿಕ್ಕಿದ ಕಾರ್ಯಕರ್ತರು ಬೈಕ್ ರಾಲಿಯಲ್ಲಿ ಪಾಲ್ಗೊಂಡರು.  ರಾಲಿಯುದ್ದಕ್ಕೂ ಪ್ರಸಾದ್ ರಾಜ್ ಕಾಂಚನ್ ಪರ ಘೋಷಣೆಗಳು ಮೊಳಗಿದವು. ಈ ಮೂಲಕ ಅವರು ಮತ ಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾಂಗ್ರೆಸ್ ಮುಖಂಡ ಎಂ.ಎ ಗಫೂರ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ್ ಹೇರೂರು ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article