ಅದ್ದೂರಿಯಾಗಿ ಜರುಗಿದ "ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ"ದ 15ನೇ ವರುಷದ ಸಂಭ್ರಮಾಚರಣೆ : ನೂತನ ಅಧ್ಯಕ್ಷ  ಗೋಪಾಲ್ ಶೆಟ್ಟಿ ಮತ್ತು ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ

ಅದ್ದೂರಿಯಾಗಿ ಜರುಗಿದ "ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ"ದ 15ನೇ ವರುಷದ ಸಂಭ್ರಮಾಚರಣೆ : ನೂತನ ಅಧ್ಯಕ್ಷ ಗೋಪಾಲ್ ಶೆಟ್ಟಿ ಮತ್ತು ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ

ಸೌದಿ ಅರೇಬಿಯಾ : ಇಲ್ಲಿನ ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ತನ್ನ 15ನೇ ವಾರ್ಷಿಕೋತ್ಸವವನ್ನು ದಮಾಮ್ ಪರಿಸರದಲ್ಲಿರುವ ಕ್ರಿಸ್ಟಲ್ ಸಭಾಂಗಣದಲ್ಲಿ ಅದ್ದೊರಿಯಿಂದ ಆಚರಿಸಿದ್ದು ಸುಮಾರು 500ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು . 

15 ವರುಷಗಳ ಹಿಂದೆ ಕೇವಲ 17 ಸಮಾನ ಮನಸ್ಕರೊಂದಿಗೆ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಇದೀಗ ನೂರಾರು ಸದಸ್ಯರುಗಳನ್ನು ಹೊಂದಿದೆ . ಸಂಘಟನೆಯು   ವೈದ್ಯಕೀಯ,ಶೈಕ್ಷಣಿಕ ಹಾಗು ಇನ್ನಿತರ ಸಮಾಜದ ಬೇಕು ಬೇಡಗಳಿಗೆ ,ನೋವು ನಲಿವುಗಳಿಗೆ ಸ್ಪಂದಿಸುತ್ತಾ ಇದೀಗ ಸಾರ್ಥಕತೆಯ ಒಂದೂವರೆ ದಶಕವನ್ನು ಪೂರೈಸಿದೆ . 











ಸಂಘಟನೆಯ  ಅಧ್ಯಕ್ಷರಾದ ಸತೀಶ್ ಬಜಾಲ್ ರವರು ಸಲಹಾ ಸಮಿತಿಯ ಸದಸ್ಯರಾದ ರವಿ ಕರ್ಕೇರ ,ದಯಾನಂದ್ ಶ್ರೀಯಾನ್ ,ಸದಾಶಿವ್ ಪೂಜಾರಿ ,ನರೇಂದ್ರ ಶೆಟ್ಟಿ ,ನವೀನ್ ಭಂಡಾರಿ ಹಾಗು ಆಡಳಿತ ಮಂಡಳಿಯ ಸದಸ್ಯರು ಒಂದಾಗಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು . 

ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಅಮೀರ್ ಹುಸೈನ್ ರವರು ಸಂಘಟನೆಯ ವಾರ್ಷಿಕ ಚಟುವಟಿಕೆಗಳು ಹಾಗು ಆಯವ್ಯಯಗಳ ವರದಿಯನ್ನು ಸಲ್ಲಿಸಿದರು . ಸಂಘಟನೆಯ ಅಧ್ಯಕ್ಷರಾದ ಶ್ರೀ ಸತೀಶ್ ಬಜಾಲ್ ರವರು ಮಾತನಾಡಿ ಸಂಘಟನೆಯ ಸದಸ್ಯರ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತ "ಕೋವಿಡ್ " ನಿಂದಾಗಿ ನಾವು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗದಿದ್ದರೂ ನಮ್ಮ ಸಂಘಟನೆಯಿಂದ  ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳೂ ಆಗುತ್ತಾ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು. 

"ಮಾಸ " ದ ಹಿರಿಯ ಸದಸ್ಯ ನರೇಂದ್ರ ಶೆಟ್ಟಿ ಹಾಗು ಪುಟ್ಟರಾಜು ರವರಿಗೆ ಸಂಘಟನೆಗೆ ,ಸಮಾಜಕ್ಕೆ ನೀಡಿರುವ ಅನನ್ಯ ಸೇವೆಯನ್ನು ಪರಿಗಣಿಸಿ  "ಮಾಸ ವರುಷದ ವ್ಯಕ್ತಿ " ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು . ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕ್ರತರಾದ ಶ್ರೀ ರಾಜ್ ಕುಮಾರ್ ರವರನ್ನು ಸಮ್ಮಾನಿಸಲಾಯಿತು . ವೈವಾಹಿಕ ವಾರ್ಷಿಕೋತ್ಸವದ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ದಂಪತಿಗಳನ್ನು ಅಭಿನಂದಿಸಲಾಯಿತು . 

ಈ ಸಂಧರ್ಭದಲ್ಲಿ ಮಾತನಾಡಿದ "ಮಾಸ " ಸಂಘಟನೆಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಶ್ರೀ ರವಿ ಕರ್ಕೇರ ರವರು ಮಾತನಾಡಿ "  ನಿಮ್ಮೆಲ್ಲರ ತುಂಬು ಹೃದಯದ ಪ್ರೋತ್ಸಾಹವೇ ಸಂಘಟನೆಯ ಯಶಸ್ಸಿನ ಗುಟ್ಟು. ನಮ್ಮೆಲ್ಲ ಸಮಾಜಮುಖಿ ಕಾರ್ಯಕ್ರಮಗಳಿಗೆ ನೀವೆಲ್ಲರೂ ತನು ಮನ ಧನದ ಪ್ರೋತ್ಸಾಹವನ್ನು ನಿರಂತರವಾಗಿ ನೀಡುತ್ತಾ ಬಂದಿದ್ದೀರಿ . ಈ ವೇದಿಕೆಯಲ್ಲಿ ಪ್ರದರ್ಶನ ನೀಡುತಿದ್ದ ಮಕ್ಕಳು ಬೆಳೆದು ಇಂದು ಡಾಕ್ಟರ್ ಆಗಿ ,ಇಂಜಿನಿಯರ್ ಆಗಿ ಪ್ರಶಸ್ತಿಗಳನ್ನು ಪಡೆಯುವಾಗ ನಮಗೆ ತುಂಬಾ ಹೆಮ್ಮೆಯೆನಿಸುತ್ತದೆ . ಸಮಾಜದಲ್ಲಿ ನೊಂದವರಿಗೆ , ಅಸಹಾಯಕರಿಗೆ ಸಹಾಯ ಮಾಡುವುದರಿಂದ ಸಿಗುವ ಸಂತೋಷ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ " ಎಂದರು . 

ಇದೆ ಸಂಧರ್ಭದಲ್ಲಿ ವಾರ್ಷಿಕ ಸ್ಮರಣಿಕೆ " ಹೊಂಗಿರಣ " ವನ್ನು ಬಿಡುಗಡೆಗೊಳಿಸಲಾಯಿತು . ಅಲ್ಲದೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಗೋಪಾಲ್ ಶೆಟ್ಟಿ ಹಾಗು ಉಳಿದ ಆಡಳಿತ ಮಂಡಳಿಯ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜರುಗಿತು . ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ವೈವಿಧ್ಯಮಯ ನ್ರತ್ಯ ಪ್ರದರ್ಶನಗಳು ,ಗಾಯನ ,ಹಾಸ್ಯ ಪ್ರಹಸನಗಳು ರಂಗದ ಮೇಲೆ ರಂಗದ ಮೇಲೆ ಅನಾವರಣಗೊಂಡು ನೆರೆದವರನ್ನು ರಂಜಿಸಿತು . ರುಚಿಕರವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಅದ್ರಷ್ಟ ಬಹುಮಾನದ ರೂಪವಾಗಿ ಬೆಲೆಬಾಳುವ ಬಹುಮಾನಗಳು ಹಲವಾರು ಸದಸ್ಯರುಗಳು ತಮ್ಮದಾಗಿಸಿಕೊಂಡರು . "ಕೋವಿಡ್ " ನ ನಂತರ ಒಂದು ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಬಹಳ ಸಮಯದ ನಂತರ ಒಂದಾದ ಸದಸ್ಯರು ಸಂತೋಷದಿಂದ ಕಾಲಕಳೆದರು . ಉಪಾಧ್ಯಕ್ಷರಾದ ಶ್ರೀ ಗೋಪಾಲ್ ಶೆಟ್ಟಿ ಯವರ ಧನ್ಯಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು . 

ವರದಿ-ಕಮಲಾಕ್ಷ ಅಮೀನ್ 


Ads on article

Advertise in articles 1

advertising articles 2

Advertise under the article