
ಕಾಪು ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರ ನಡೆಸಿದ APP: ಮನೆ ಮನೆ ತೆರಳಿ ಮತಯಾಚಿಸಿದ APP ಅಭ್ಯರ್ಥಿ ಎಸ್.ಆರ್.ಲೋಬೊ
Sunday, May 7, 2023
ಕಾಪು: ಕಾಪು ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಎಸ್.ಆರ್.ಲೋಬೊ ಹಲವು ದಿನಗಳಿಂದ ತಮ್ಮ ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರದಲ್ಲಿ ತೊಡಗಿದ್ದಾರೆ.
ಕ್ಷೇತ್ರದ ಹೆಜಮಾಡಿ, ಪಡುಕೆರೆ, ಶಿರ್ವ, ಬೆಳಪು, ಮಜೂರು ಸೇರಿದಂತೆ ಹತ್ತಲವು ಕಡೆ ರವಿವಾರ ಚುನಾವಣಾ ಪ್ರಚಾರ ನಡೆಸಿದ್ದು, ಮನೆ ಮನೆ ತೆರಳಿ ಮತಯಾಚಿಸಿದರು.
ಈ ವೇಳೆ ಆಮ್ ಆದ್ಮಿ ಪಾರ್ಟಿಯ ತತ್ವ, ಸಿದ್ಧಾಂತ, ಅಭಿವೃದ್ಧಿಯ ಕಾರ್ಯದ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟ ಎಸ್.ಆರ್.ಲೋಬೊ, ಈ ಬಾರಿ ತನ್ನನ್ನು ಬೆಂಬಲಿಸಿ ಮತಹಾಕುವಂತೆ ಮನವಿ ಮಾಡಿದರು.