ಪಡುತೋನ್ಸೆ ಬೇಂಗ್ರೆಯಿಂದ ಮಲ್ಪೆ-ಕಲ್ಮಾಡಿ ಚರ್ಚ'ವರಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪರ ಬೃಹತ್ ಬೈಕ್ ರಾಲಿ: ರಾಲಿಯುದ್ದಕ್ಕೂ ಕೈ ಪರ ಮೊಳಗಿದ ಘೋಷಣೆ
ಉಡುಪಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪರ ಪ್ರಚಾರದ ಬೈಕ್ ರಾಲಿಯನ್ನು ರವಿವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿತ್ತು.
ಅಪಾರ ಕಾರ್ಯಕರ್ತರನ್ನೊಳಗೊಂಡ ಈ ರಾಲಿ ಪಡುತೋನ್ಸೆ ಬೇಂಗ್ರೆಯ ರಾಮ ಭಜನಾ ಮಂದಿರದಿಂದ ಬೈಕ್ ರ್ಯಾಲಿಯು ಹೊರಟು ಹೂಡೆಯಿಂದ ಗುಜ್ಜರಬೆಟ್ಟು ಮಾರ್ಗವಾಗಿ ತೊಟ್ಟಂನಿಂದ ವಡಭಾಂಡೇಶ್ವರ ಸರ್ಕಲ್‌ನಿಂದ ರಾಜರಸ್ತೆಯ ಮೂಲಕ ಏಳೂರು ಮೊಗವೀರ ಸಭಾಭವನದ ಮಾರ್ಗವಾಗಿ ಕಲ್ಮಾಡಿ ಚರ್ಚ್ ಬಳಿ ಬೈಕ್ ರ್ಯಾಲಿ ಮುಗಿಸಿ ನಂತರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರು ಪಾಲ್ಗೊಂಡರು.
ಮುಖ್ಯ ಭಾಷಣಕಾರರಾಗಿ ನಿಕೇತ್ ರಾಜ್ ಮೌರ್ಯ ಆಗಮಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಕೇರಳ ಸಂಸದ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಎನ್.ಎಸ್.ಯು.ಐ ಉಪಾಧ್ಯಕ್ಷ ಶರತ್ ಮೊದಲಾದವರು ಉಪಸ್ಥಿತರಿದ್ದರು.