ಬ್ರಹ್ಮಗಿರಿ ಸರ್ಕಲ್'ನಿಂದ ಎಸ್ಪಿ ಕಚೇರಿಗೆ ಹೋಗುವ ರಸ್ತೆಯನ್ನು ನಾರಾಯಣಗುರು ರಸ್ತೆ ಎಂದು ಮರುನಾಮಕರಣಕ್ಕೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಒತ್ತಾಯ; ಮಲ್ಪೆ ಬೀಚಿಗೆ ನಾರಾಯಣಗುರು ಹೆಸರಿಡುವಂತೆ ಮನವಿ

ಬ್ರಹ್ಮಗಿರಿ ಸರ್ಕಲ್'ನಿಂದ ಎಸ್ಪಿ ಕಚೇರಿಗೆ ಹೋಗುವ ರಸ್ತೆಯನ್ನು ನಾರಾಯಣಗುರು ರಸ್ತೆ ಎಂದು ಮರುನಾಮಕರಣಕ್ಕೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಒತ್ತಾಯ; ಮಲ್ಪೆ ಬೀಚಿಗೆ ನಾರಾಯಣಗುರು ಹೆಸರಿಡುವಂತೆ ಮನವಿ

ಉಡುಪಿ: ಇಲ್ಲಿನ ಬ್ರಹ್ಮಗಿರಿ ಸರ್ಕಲ್'ನಿಂದ ಎಸ್ಪಿ ಕಚೇರಿಗೆ ಹೋಗುವ ರಸ್ತೆಯನ್ನು ಈ ಹಿಂದೆ ಇದ್ದಂತೆ ನಾರಾಯಣಗುರು ರಸ್ತೆ ಎಂದು ಮರುನಾಮಕರಣ ಮಾಡುವಂತೆ ಉಡುಪಿ ಕ್ಷೇತ್ರದ  ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಪ್ರಭಾಕರ ಪೂಜಾರಿ ಒತ್ತಾಯಿಸಿದ್ದಾರೆ.


ಪ್ರಸಕ್ತ ಈ ರಸ್ತೆಯ ಹೆಸರನ್ನು ನಗರಸಭೆ ನಾಡೋಜ ಡಾ.ಜಿ.ಶಂಕರ್ ರಸ್ತೆ ಎಂದು ನಾಮಕರಣ ಮಾಡಿದ್ದು, ಮೊದಲು ಈ ರಸ್ತೆಯ ಹೆಸರಿನ ಬೋರ್ಡ್ ನಾರಾಯಣಗುರು ರಸ್ತೆ ಎಂದೇ ಇತ್ತು. ಇದನ್ನು ಅಕ್ರಮವಾಗಿ ಮರುನಾಮಕರಣ ಮಾಡಲಾಗಿದೆ ಎಂದು ರವಿವಾರ ಬ್ರಹ್ಮಗಿರಿ ಸರ್ಕಲ್ ಬಳಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಧರಣಿಯ ವೇಳೆ ಪ್ರಭಾಕರ ಪೂಜಾರಿ ಆರೋಪ ಮಾಡಿದ್ದಾರೆ.

ಈ ರಸ್ತೆಯ ಹೆಸರನ್ನು ಮರುನಾಮಕರಣ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನ್ನಸತ್ಯಾಗ್ರಹ ಮಾಡುವ ಬೆದರಿಕೆ ಹಾಕಿದ ಅವರು, ಈ ರಸ್ತೆಗೆ ಅಕ್ರಮವಾಗಿ ನಾಮಕರಣ ಮಾಡಲಾಗಿದೆ ಎಂದು ದೂರಿದರು.

ಬಿಲ್ಲವ ಸಮುದಾಯದ ಮಹಾನ್ ಗುರುಗಳಾಗಿರುವ ನಾರಾಯಣ ಗುರುಗಾಲ ಹೆಸರು ತೆಗೆಯುವ ಮೂಲಕ ನಮ್ಮ ಮನಸಿಗೆ ಘಾಸಿಯುಂಟು ಮಾಡಿದ್ದಾರೆ. ಬಿಜೆಪಿಯವರ ಸೂಚನೆಯಂತೆ ನಗರ ಸಭೆಯವರು ಈ ಬೋರ್ಡ್ ಹಾಕಿದ್ದಾರೆ. ಇದಕ್ಕೆ ತಮ್ಮ ವಿರೋಧವಿದೆ ಎಂದು ಪ್ರಭಾಕರ ಪೂಜಾರಿ ಹೇಳಿದರು.

ಮಲ್ಪೆ ಬೀಚಿಗೆ ನಾರಾಯಣಗುರು ಬೀಚ್ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದ ಪ್ರಭಾಕರ ಪೂಜಾರಿ, ಬೀಚಿಗೆ ಹೋಗುವ ರಸ್ತೆಯನ್ನು ಕೂಡ ನಾರಾಯಣಗುರು ರಸ್ತೆ ಎಂದು ನಾಮಕರಣ ಮಾಡಬೇಕು. ಇದು ನಮ್ಮ ಬೇಡಿಕೆಯಾಗಿದೆ ಎಂದರು.

Ads on article

Advertise in articles 1

advertising articles 2

Advertise under the article