ಮಲ್ಪೆ ಮನೆ ತೆರವು ನೊಟೀಸ್: ಜಿಲ್ಲಾಧಿಕಾರಿಗೆ ಅಂಬೇಡ್ಕರ್ ಯುಸೇನೆ ಮನವಿ

ಮಲ್ಪೆ ಮನೆ ತೆರವು ನೊಟೀಸ್: ಜಿಲ್ಲಾಧಿಕಾರಿಗೆ ಅಂಬೇಡ್ಕರ್ ಯುಸೇನೆ ಮನವಿ

ಮಲ್ಪೆ: ಇಲ್ಲಿನ ಕಡಲ ತೀರದ ಪೂರ್ವ ಭಾಗದ ತೀರ ಪ್ರದೇಶದಲ್ಲಿರುವ ಹಲವು ಬಡ ದಲಿತ ಕುಟುಂಬಗಳ ಮನೆ ತರವುಗೊಳಿಸಲು ಮಲ್ಪೆ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತರು ನೀಡಿರುವ ನೊಟೀಸಿನ ವಿರುದ್ಧ ಆಕ್ಷೇಪಿಸಿ ಜಿಲ್ಲಾಧಿಕಾರಿಗೆ ಅಂಬೇಡ್ಕರ್ ಯುವಸೇನೆ ಮನವಿ ಸಲ್ಲಿಸಿದೆ.

ಕಳೆದ ಹಲವು ದಶಕಗಳಿಂದ ಸಮುದ್ರತೀರ ಪ್ರದೇಶದಲ್ಲಿ ಮನೆಕಟ್ಟಿಕೊಂಡು ವಾಸವಾಗಿರುವ ದಲಿತ ಕುಟುಂಬಗಳಿಗೆ ಏಕಾಎಕಿ ಸಿ.ಆರ್.ಝಡ್ ಇಲಾಖಾ ನಿಯಮ 2011 ಮತ್ತು 2019ರ ಅನ್ವಯ ಹಾಗೂ ಮುನ್ಸಿಪಾಲ್ ಆಕ್ಟ್ 187ರಂತೆ ಕಾನೂನು ಬಾಹಿರ ಎಂದು ನೊಟೀಸು ಜಾರಿಗೊಳಿಸಿದ್ದು ಇದೇ ಕರಾವಳಿ ಬಂದರು ಪ್ರದೇಶದ ಸುತ್ತುಮುತ್ತ ಅತಿಕ್ರಮಣ ಮಾಡಿಕೊಂಡು ಮನೆ,ರೆಸಾರ್ಟ್,ಅಂಗಡಿ ಇತ್ಯಾದಿಗಳ ವಿರುದ್ಧ ಯಾವುದೇ ಕಾನೂನುಕ್ರಮ ಕೈಗೊಳ್ಳದೆ ಕೇವಲ ದಲಿತ ಕುಟುಂಬದ ಮೇಲೆ ನೊಟೀಸ್ ನೀಡಿ ದೌರ್ಜನ್ಯ ನೀಡಿರುವುದಕ್ಕೆ ಜನಪರ ಹೋರಾಟಗಾರ ಜಯನ್ ಮಲ್ಪೆ ಆಕ್ಷೇಪಿಸಿದ್ದಾರೆ.

ಇಲ್ಲಿ ಹುವು ದಶಕಗಳಿಂದ ವಾಸವಾಗಿರುವ ದಲಿತ ಕುಟುಂಬಗಳಿಗೆ ಮನೆನಂಬ್ರ,ಆಧಾರ್ ಕಾರ್ಡ್,ರೇಶನ್ ಕಾರ್ಡ್,ವಿದ್ಯತ್ ಸಂಪರ್ಕ ಎಲ್ಲಾ ಕಾನೂನುಬದ್ಧವಾಗಿ ಪಡೆದಿದ್ದರೂ,ಅನದಿಕೃತವೆಂಬ ನಿಯಮದಡಿ ಈ ಬಡಪಾಯಿ ದಲಿತ ಕುಟುಂಬಗಳಿಗೆ ತೆರವುಗೊಳಿಸುವ ಭಯದ ನೊಟೀಸ್ ನೀಡಿ ದೌಜನ್ಯ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ನಿಯೋಗದಲ್ಲಿ ಜನಪರ ಹೋರಾಟಗಾರ ಜಯನ್ ಮಲ್ಪೆ,ಅಂಬೇಡ್ಕರ್ ಯುವಸೇನೆಯ ಜಿಲ್ಲಾ ಅಧ್ಯಕ್ಷ ಹರೀಶ್ ಸಾಲ್ಯಾನ್, ಗಣೇಶ್ ನೆರ್ಗಿ,  ಸಂತೋಷ್ ಕಪ್ಪೆಟ್ಟು, ಕೃಷ್ಣ ಶ್ರೀಯಾನ್ ಮಲ್ಪೆ, ಗುಣವಂತ ತೊಟ್ಟಂ,ಪ್ರಸಾದ್, ವಿನಯ ಬಲರಾಮನಗರ, ಗೀತಾ, ಸಂಕಿ, ಜಲಜ, ಲಲಿಗ್ಫಿ, ಸುಂದರಿ ಮುಂತಾದವರು ಭಾಗವಹಿಸಿದ್ದರು.    


Ads on article

Advertise in articles 1

advertising articles 2

Advertise under the article