
ಕಾರ್ಯಕರ್ತರು ಧೃತಿಗೆಡುವ ಅವಶ್ಯವಿಲ್ಲ, ನಿಮ್ಮೊಂದಿಗೆ ನಾನಿರುವೆ: ಕೃತಜ್ಞತಾ ಸಮರ್ಪಣ ಸಭೆಯಲ್ಲಿ ವಿನಯ್ ಕುಮಾರ್ ಸೊರಕೆ
ಹಿರಿಯಡ್ಕ: ರವಿವಾರ ಹಿರಿಯಡ್ಕದಲ್ಲಿ ಜರಗಿದ ಕೃತಜ್ಞತಾ ಸಮರ್ಪಣ ಸಭೆಯಲ್ಲಿ ಚುನಾವಣೆಯಲ್ಲಿ ಲಭಿಸಿದ ಫಲಿತಾಂಶದ ಬಗ್ಗೆ ಚಿಂತನ ಮಂಥನ ಜರಗಿತು. ಸೋಲಿನ ಕಾರಣಗಳು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ (ಸರಕಾರದ) ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಅಲ್ಲದೆ ಮುಂಬರುವ ಗ್ರಾಮ ಪಂಚಾಯತ್ , ಜಿಲ್ಲಾ ಪಂಚಾಯತ್, ಚುನಾವಣೆ 2024ರ ಲೋಕಸಭಾ ಚುನಾವಣೆಯಲ್ಲಿ ಅನೇಕ ರೀತಿಯ ಅಪಪ್ರಚಾರಗಳನ್ನು ಎದುರಿಸುವ ಕುರಿತು ಚರ್ಚೆ ಅನಿಸಿಕೆಗಳು ಕಾರ್ಯಕರ್ತರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು ವಿನಯ್ ಕುಮಾರ್ ಸೊರಕೆ ಮಾತನಾಡಿದ ಕಾರ್ಯಕರ್ತರು ಧೃತಿಗೆಡ ಬೇಕಾದ ಅವಶ್ಯಕತೆ ಇಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಕಾರ್ಯಕರ್ತರು ಮತ್ತು ಮುಖಂಡರ ಬೇಡಿಕೆಯನ್ನು ಈಡೇರಿಸುವ ಮಾಡುತ್ತೇನೆ ಮುಂದಿನ ದಿನಗಳಲ್ಲಿ ಸರಕಾರದಿಂದ ವಿವಿಧ ನಿಗಮ ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರಿಗೆ ನಾಮಕರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಆಡಳಿತ ಯಂತ್ರ ಚುರುಕುಗೊಳಿಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕ್ಷೇತ್ರದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಅವಿರತ ಅಹೋ ರಾತ್ರಿ ದುಡಿದ ಕಾರ್ಯಕರ್ತರಿಗೆ ಪಕ್ಷದ ಮುಖಂಡರಿಗೆ ಮತದಾರರಿಗೆ ಕೃತಜ್ಞತೆ ತಿಳಿಸುತ್ತಾ ಎಂದೆಂದಿಗೂ ನಿಮ್ಮೊಡನೆ ಈ ಹಿಂದಿನ ರೀತಿಯಲ್ಲಿ ನಿಮ್ಮ ಕಷ್ಟ ಸುಖಕ್ಕೆ ಒಬ್ಬನಾಗಿ ಇರುತ್ತೇನೆ ಭರವಸೆ ನೀಡಿದರು.