ಆರ್‌ಬಿಐ 2000 ರೂಪಾಯಿ ನೋಟ್ ಹಿಂಪಡೆದಿದ್ದೇಕೆ ? ನೋಟ್ ವಿನಿಮಯಕ್ಕೆ ಆರ್‌ಬಿಐ ಏನು ಹೇಳಿದೆ ? ನೋಟ್ ಬದಲಿಸಲು ಕೊನೆಯ ದಿನ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಆರ್‌ಬಿಐ 2000 ರೂಪಾಯಿ ನೋಟ್ ಹಿಂಪಡೆದಿದ್ದೇಕೆ ? ನೋಟ್ ವಿನಿಮಯಕ್ಕೆ ಆರ್‌ಬಿಐ ಏನು ಹೇಳಿದೆ ? ನೋಟ್ ಬದಲಿಸಲು ಕೊನೆಯ ದಿನ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: 2000 ರೂಪಾಯಿಗಳ ಪಿಂಕ್ ನೋಟನ್ನು ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ (RBI) ಘೋಷಿಸಿದೆ. ಇದೇ ಮೇ 23ರಿಂದ ಬ್ಯಾಂಕ್‌ಗಳಲ್ಲಿ ಪಿಂಕ್ ನೋಟ್ ಬದಲಿಸಿಕೊಳ್ಳುವಂತೆ ಹೇಳಿದೆ. ಪಿಂಕ್ ನೋಟ್ ಬದಲಿಸಲು ಇದೇ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಹಾಗಾದರೆ ಆರ್‌ಬಿಐನ ಈ ನಿರ್ಧಾರಕ್ಕೆ ಕಾರಣವೇನು? ನೋಟ್ ಬದಲಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಆರ್‌ಬಿಐ ಇದೀಗ ಮಹತ್ವದ ನಿರ್ಧಾರ ಘೋಷಿಸಿದೆ. ಈ ತಕ್ಷಣದಿಂದ ಜಾರಿ ಬರುವಂತೆ 2000 ಮುಖಬೆಲೆಯ ನೋಟುಗಳ ವಿನಿಮಯವನ್ನು ನಿಲ್ಲಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಇದೇ ಮೇ 23, 2023 ರಿಂದ ಪ್ರಾರಂಭವಾಗುವ ಯಾವುದೇ ಬ್ಯಾಂಕ್‌ನಲ್ಲಿ 2000 ರೂಪಾಯಿ ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.

2000 ರೂಪಾಯಿ ಮುಖಬೆಲೆಯ ಪಿಂಕ್ ನೋಟುಗಳನ್ನು ಆರ್‌ಬಿಐನ ಶಾಖೆಗಳು ಅಥವಾ ಯಾವುದೇ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಇದೇ 2023 ಮೇ 23, ಮಂಗಳವಾರದಿಂದ 2023, ಸೆಪ್ಟೆಂಬರ್ 30 ಶನಿವಾರದವರೆಗೆ ವಿನಿಮಯ ಮಾಡಿಕೊಳ್ಳಬಹುದು.

2000 ರೂಪಾಯಿ ನೋಟ್ ವಿನಿಮಯಕ್ಕೆ ಆರ್‌ಬಿಐ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಅದರಂತೆ ಬ್ಯಾಂಕ್‌ಗಳು 2 ಸಾವಿರ ರೂಪಾಯಿ ನೋಟು ಪಡೆದುಕೊಳ್ಳಬಹುದು. ಆದರೆ ಗ್ರಾಹಕರಿಗೆ 2 ಸಾವಿರ ರೂಪಾಯಿ ನೋಟ್ ಕೊಡುವಂತಿಲ್ಲ. ಇನ್ನು ಗ್ರಾಹಕರು 2000 ರೂಪಾಯಿ ನೋಟ್ ಕೊಟ್ಟು 500,100ರ ನೋಟ್‌ಗಳನ್ನು ಪಡೆಯಬಹುದು. ಆದರೆ ಒಬ್ಬ ಗ್ರಾಹಕ ಒಂದು ದಿನಕ್ಕೆ 20 ಸಾವಿರ ರೂಪಾಯಿಗಳಷ್ಟು ಮಾತ್ರ ಹಣ ವಿನಿಮಯ ಮಾಡಿಕೊಳ್ಳಬೇಕು.

2000 ಮುಖಬೆಲೆಯ ಪಿಂಕ್ ನೋಟನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಯ್ತು. RBI ಕಾಯಿದೆ, 1934 ರ ಸೆಕ್ಷನ್ 24 (1)ರ ಅಡಿಯಲ್ಲಿ ಪರಿಚಯಿಸಲಾಯಿತು.  ಪ್ರಾಥಮಿಕವಾಗಿ ಎಲ್ಲಾ  500 ರೂಪಾಯಿ ಮತ್ತು 1000 ರೂಪಾಯಿ ಬ್ಯಾಂಕ್‌ನೋಟುಗಳ ಕಾನೂನು ಟೆಂಡರ್ ಸ್ಥಿತಿಯನ್ನು ಹಿಂಪಡೆದ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸಲು ಆ ಸಮಯದಲ್ಲಿ ಚಲಾವಣೆಯಲ್ಲಿತ್ತು.

ಅಂದಹಾಗೆ 2018-19ರಲ್ಲಿಯೇ  2000 ರೂಪಾಯಿ ಮುಖಬೆಲೆಯ ನೋಟ್‌ಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. 2000 ರೂಪಾಯಿ ಮುಖಬೆಲೆಯ ಬ್ಯಾಂಕ್‌ನೋಟುಗಳಲ್ಲಿ ಸುಮಾರು 89% ಅನ್ನು ಮಾರ್ಚ್ 2017 ಕ್ಕಿಂತ ಮೊದಲು ನೀಡಲಾಯಿತು ಮತ್ತು ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳ ಅಂತ್ಯದಲ್ಲಿದೆ.

ಚಲಾವಣೆಯಲ್ಲಿರುವ ಈ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಗರಿಷ್ಠ 6.73 ಲಕ್ಷ ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ ಶೇಕಡಾ 37.3) 3.62 ಲಕ್ಷ ಕೋಟಿಗೆ ಇಳಿದಿದೆ, ಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಶೇಕಡಾ 10.8 ರಷ್ಟಿದೆ.

ನೋಟ್ ಹಿಂಪಡೆಯಲು ಕಾರಣ...ಇಲ್ಲಿದೆ...

2 ಸಾವಿರ ರೂಪಾಯಿ ಮುಖಬೆಲೆಯ ನೋಟ್‌ಗಳನ್ನು ಹಿಂಪಡೆಯಲು ಆರ್‌ಬಿಐ ಹಲವು ಕಾರಣಗಳನ್ನು ನೀಡಿದೆ.

ಆರ್‌ಬಿಐನ "ಕ್ಲೀನ್ ನೋಟ್ ನೀತಿ"ಗೆ ಅನುಗುಣವಾಗಿ ಈ ಬದಲಾವಣೆಯನ್ನು ತರಲಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ.89ರಷ್ಟು ನೋಟುಗಳನ್ನು 2017ರ ಮಾರ್ಚ್​ಗೂ ಮುನ್ನವೇ ಮುದ್ರಣ ಮಾಡಿ ಬಿಡುಗಡೆಗೊಳಿಸಿದಂತಹವುಗಳಾಗಿವೆ.

ಇವುಗಳ ಕಾಲಾವಧಿ 4-5 ವರ್ಷ ಮಾತ್ರ ಇದ್ದವು.

ಇದರಿಂದ ಈ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಅಂತ ಆರ್‌ಬಿಐ ಹೇಳಿದೆ.

2,000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆ ಪ್ರಮಾಣ ಕಡಿಮೆ ತೀರಾ ಆಗಿದೆ ಅಂತ ಹೇಳಲಾಗಿದೆ.

ಜನರ ಹಣಕಾಸಿನ ವಹಿವಾಟಿಗೆ ಬೇರೆ ನೋಟುಗಳನ್ನು ಸಾಕಷ್ಟು ಬಳಕೆ ಮಾಡುತ್ತಿರುವುದರಿಂದ ಈ 2,000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಇನ್ನು ಗ್ರಾಹಕರು ಆತಂಕಗೊಳ್ಳದಂತೆ ಆರ್‌ಬಿಐ ಹೇಳಿದೆ. ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂಪಾಯಿ ಮುಖಬೆಲೆಯ ನೋಟುಗಳಿಗೆ ಬ್ಯಾಂಕ್​ಗಳು ತಮ್ಮ ಶಾಖೆಗಳಲ್ಲಿ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಘೋಷಿಸಿದೆ. ಯಾರೂ ಕೂಡ ಭಯ ಹಾಗೂ ಆತಂಕಕ್ಕೆ​ ಒಳಗಾಗಬಾರದು. ಈ ನೋಟುಗಳ ವಿನಿಮಯಕ್ಕೆ ನಾಲ್ಕು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಕಾಶ ಉಪಯೋಗಿಸಿಕೊಂಡು ನೋಟ್ ಬದಲಾಯಿಸಿಕೊಳ್ಳಿ ಎಂದು ಆರ್‌ಬಿಐ ಮನವಿ ಮಾಡಿದೆ.

Ads on article

Advertise in articles 1

advertising articles 2

Advertise under the article