ಬಿಜೆಪಿಯ ಭದ್ರ ಕೋಟೆ ಪೆರ್ಡೂರಿನಲ್ಲಿ ಮತಯಾಚನೆ ನಡೆಸಿದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ
ಪೆರ್ಡೂರು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ಬಿಜೆಪಿಯ ಭದ್ರ ಕೋಟೆಯಾಗಿರುವ ಪೆರ್ಡೂರಿನ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ತೆರಲಿ ಮಾತಾಯಾಚನೆ ಮಾಡಿದರು.
ಈ ಸಂದರ್ಭ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಗೆಲುವಿಗಿಂತ ಧರ್ಮ ಗೆಲ್ಲಬೇಕು ನಾಡಿನ ಪರಂಪರೆ ಗೆಲ್ಲಬೇಕು, ಹಾಗೂ ನರೇಂದ್ರ ಮೋದಿಯವರ ಸಂಕಲ್ಪ ಗೆಲ್ಲಬೇಕು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ 1ನೇ ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಬಿಜೆಪಿ ಬೆಂಬಲಿತ ಸದಸ್ಯ ದೇವು ಪೂಜಾರಿ, ಸಾಯಿ ಸುಧಾಕರ್ ಶೆಟ್ಟಿ ಮತ್ತು ಸುರೇಶ್ ಸರ್ವೇಗಾರ್, ಪೆರ್ಡೂರು ಶಕ್ತಿ ಕೇಂದ್ರದ ಅಧ್ಯಕ್ಷರುಗಳು, ಸುಭಾಷ್ ಹೆಗಡೆ ಉದ್ಯಮಿಗಳು ಪೆರ್ಡೂರು, ಕೃಷ್ಣಾನಂದ ಶೆಟ್ಟಿ ಮತ್ತು ಕಿರಣ್ ಪೂಜಾರಿ ಉದ್ಯಮಿಗಳು, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಸಮಿತಿಯ ಸದಸ್ಯರ ಡಾಕ್ಟರ್ ವಿದ್ಯಾದರ ಶೆಟ್ಟಿ ಕಾಪು ಕ್ಷೇತ್ರದ ಉಪಾಧ್ಯಕ್ಷರಾದ ಸುಭಾಷ್ ನಾಯ್ಕ್ ಮತ್ತು ವಿಶ್ವ ಹಿಂದೂ ಪರಿಷತ್, ಬಜರಂಗದಳ ಪೆರಡೂರು ಘಟಕದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.