ಕಾಪು ಬಿಜೆಪಿಯ ಕಾರ್ಯಾಲಕ್ಕೆ ಭೇಟಿ ನೀಡಿದ ನಟಿ ತಾರಾ, ಕೋಟ ಶ್ರೀನಿವಾಸ ಪೂಜಾರಿ; ಗುರ್ಮೆ ಸುರೇಶ್ ಶೆಟ್ಟಿಯೊಂದಿಗೆ ಚರ್ಚೆ
Tuesday, May 2, 2023
ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಅವರ ಚುನಾವಣಾ ಪ್ರಚಾರ ಬಲುಜೋರಾಗಿಯೇ ನಡೆಯುತ್ತಿದ್ದು, ಚುನಾವಣಾ ಮಾತಯಾಚನ ಸಮಯದಲ್ಲಿ ಕಾಪು ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಕ್ಕೆ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಪಕ್ಷದ ಸ್ಟಾರ್ ಪ್ರಚಾರಕರಾದ ನಟಿ ತಾರಾರವರು ಕಾರ್ಯಾಲಯಕ್ಕೆ ಭೇಟಿ ಕೊಟ್ಟರು. ಈ ವೇಳೆ ಚುನಾವಾ ಪ್ರಚಾರದ ಬಗ್ಗೆ ಗುರ್ಮೆ ಸುರೇಶ್ ಶೆಟ್ಟಿ ಅವರೊಂದಿಗೆ ತಾರಾ ಚರ್ಚೆ ನಡೆಸಿದರು.