ಬೆಳ್ತಂಗಡಿಯಲ್ಲಿ ಬಿಜೆಪಿಯ ಹರೀಶ್ ಪೂಂಜಾ ಜಯಗಳಿಸಿದ್ದು, ಕಾಂಗ್ರೆಸ್ಸಿನ ರಕ್ಷಿತ್ ಶಿವರಾಂ ಸೋಲು ಕಂಡಿದ್ದಾರೆ. ಉಡುಪಿಯಲ್ಲಿ ಬಿಜೆಪಿಯ ಯಶಪಾಲ್ ಸುವರ್ಣ ಜಯ ಗಳಿಸಿದ್ದು, ಕಾಂಗ್ರೆಸ್ಸಿನ ಪ್ರಸಾದ್ ರಾಜ್ ಕಾಂಚನ್ ಸೋಲುಗೆ ಶರಣಾಗಿದ್ದಾರೆ. ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಜಯದ ನಗೆ ಬೀರಿದ್ದಾರೆ. ಮುನಿಯಾಲು ಉದಯ ಕುಮಾರ್ ಶೆಟ್ಟಿ ಸೋಲನ್ನುಭವಿಸಿದ್ದಾರೆ.