ಪುಲ್ವಾಮಾದಲ್ಲಿನ ಮಸೀದಿಯೊಳಗೆ ಪ್ರವೇಶಿಸಿ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವಂತೆ ಭಾರತೀಯ ಸೇನೆಯಿಂದ ಬಲವಂತ: ಮೆಹಬೂಬಾ ಮುಫ್ತಿ ಆರೋಪ

ಪುಲ್ವಾಮಾದಲ್ಲಿನ ಮಸೀದಿಯೊಳಗೆ ಪ್ರವೇಶಿಸಿ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವಂತೆ ಭಾರತೀಯ ಸೇನೆಯಿಂದ ಬಲವಂತ: ಮೆಹಬೂಬಾ ಮುಫ್ತಿ ಆರೋಪ

ಹೊಸದಿಲ್ಲಿ: ಭಾರತೀಯ ಸೇನೆಯ ತಂಡವೊಂದು ಪುಲ್ವಾಮಾದಲ್ಲಿನ ಮಸೀದಿ ಒಳಗೆ ಪ್ರವೇಶಿಸಿ ಅಲ್ಲಿದ್ದ ಮುಸ್ಲಿಮರನ್ನು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ಭಾರತೀಯ ಸೇನೆಯ 50 ಆರ್‌ಆರ್‌ನ ತಂಡವು ಮಸೀದಿಗೆ ನುಗ್ಗಿ ಬಲವಂತವಾಗಿ ಜೈ ಶ್ರೀರಾಂ ಘೋಷಣೆ ಕೂಗಿಸಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆಯೂ ಆಗಿರುವ ಮುಫ್ತಿ ಶನಿವಾರ ಹೇಳಿದ್ದಾರೆ.

ಇದು ಜನರನ್ನು ಪ್ರಚೋದಿಸುವ ತಂತ್ರ ಎಂದು ಕಿಡಿಕಾರಿರುವ ಮುಫ್ತಿ, ಈ ವಿಚಾರದಲ್ಲಿ ತನಿಖೆ ಆರಂಭಿಸಲು ಆದೇಶಿಸುವಂತೆ ಲೆಫ್ಟಿನೆಂಟ್ ಗವರ್ನರ್ ರಾಜೀವ್ ಘಾಯ್ ಅವರನ್ನು ಒತ್ತಾಯಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ರಾಜೀವ್ ಘಾಯ್ ಅವರು ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ನೇತೃತ್ವವನ್ನು ಜೂನ್ 14ರಂದು ವಹಿಸಿಕೊಂಡಿದ್ದರು. ಪಾಕಿಸ್ತಾನದ ಜತೆಗಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಹೊಣೆಗಾರಿಕೆ ಅವರಿಗೆ ಬಂದಿದೆ.

"50 ಆರ್‌ಆರ್‌ನ ಸೇನಾ ಪಡೆಗಳು ಪುಲ್ವಾಮಾದಲ್ಲಿನ ಮಸೀದಿಯೊಂದಕ್ಕೆ ನುಗ್ಗಿದ ಹಾಗೂ ಅದರ ಒಳಗಿದ್ದ ಮುಸ್ಲಿಮರಿಂದ ಬಲವಂತವಾಗಿ ಜೈ ಶ್ರೀರಾಮ್ ಎಂದು ಕೂಗಿಸಿದ ಘಟನೆ ಬಗ್ಗೆ ಕೇಳಿ ಆಘಾತವಾಗಿದೆ. ಅಮಿತ್ ಶಾ ಅವರು ಇಲ್ಲಿ ಇರುವಾಗ ಹಾಗೂ ಯಾತ್ರೆ ಕೂಡ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಯು ಕೆಣಕುವ ತಂತ್ರವಾಗಿದೆ. ರಾಜೀವ್ ಘಾಯ್ ಅವರು ಕೂಡಲೇ ತನಿಖೆ ಆರಂಭಿಸಬೇಕು ಎಂದು ಮನವಿ ಮಾಡುತ್ತೇನೆ" ಎಂದು ಮುಫ್ತಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ 20 ಕಾರ್ಯಕ್ರಮ ನಡೆಸಲು ತಯಾರಿ ಮಾಡುವಾಗ ಸ್ಥಳೀಯ ವ್ಯಕ್ತಿಗಳನ್ನು ಬಂಧಿಸಿ, ಚಿತ್ರ ಹಿಂಸೆ ನೀಡಲಾಗುತ್ತಿದೆ ಎಂದು ಏಪ್ರಿಲ್‌ನಲ್ಲಿ ಮುಫ್ತಿ ಆರೋಪಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯು ಗ್ವಾಂಟನಮೋ ಬೇಗಿಂತ (ಅಮೆರಿಕ ಸೇನೆಯ ಬಂಧನ ಶಿಬಿರ) ಕೆಟ್ಟದಾಗಿದೆ ಎಂದು ಹೇಳಿದ್ದ ಪಿಡಿಪಿ ಮುಖ್ಯಸ್ಥ ಮುಫ್ತಿ, ಕೇಂದ್ರಾಡಳಿತ ಪ್ರದೇಶದಲ್ಲಿ ಜಿ 20 ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭವಾದ ಸಮಯದಿಂದ ನೂರಾರು ಸ್ಥಳೀಯರ ಪುರುಷರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಶ್ರೀನಗರದಲ್ಲಿ ಮೇ ತಿಂಗಳಲ್ಲಿ ಜಿ 20 ಕಾರ್ಯಕ್ರಮ ನಡೆದಿತ್ತು.

Ads on article

Advertise in articles 1

advertising articles 2

Advertise under the article