ಪುಲ್ವಾಮ ದಾಳಿಯಲ್ಲಿ ಅಮಾಯಕ ಸೈನಿಕರನ್ನ ಬಲಿಕೊಟ್ಟಂತಹ ಕೀರ್ತಿ ಬಿಜೆಪಿಯದ್ದು: ಹೆಚ್​ಸಿ ಬಾಲಕೃಷ್ಣ

ಪುಲ್ವಾಮ ದಾಳಿಯಲ್ಲಿ ಅಮಾಯಕ ಸೈನಿಕರನ್ನ ಬಲಿಕೊಟ್ಟಂತಹ ಕೀರ್ತಿ ಬಿಜೆಪಿಯದ್ದು: ಹೆಚ್​ಸಿ ಬಾಲಕೃಷ್ಣ

ರಾಮನಗರ: ಕಳೆದ ಭಾರಿ ಪುಲ್ವಾಮ ದಾಳಿಯಾಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ಈ ಬಾರಿ ವಿಶ್ವಮಾನವ ಆಗಲು ಟಾಟಾ ಮಾಡುತ್ತಿದ್ದಾರೆ. ಬಿಜೆಪಿಯವರು (BJP) ಬ್ರಿಟಿಷ್ ನವರು ಇದ್ದಂತೆ. ಅಮಾಯಕ ಸೈನಿಕರನ್ನ ಬಲಿಕೊಟ್ಟಂತಹ ಕೀರ್ತಿ ಬಿಜೆಪಿಯದ್ದು ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ‌ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ‌ ಮಾತನಾಡಿರುವ ಅವರು, ಬಿಜೆಪಿಯವರು ಬ್ರಿಟಿಷರು ಇದ್ದಂತೆ, ಯಾರು ಪ್ರಬಲವಾಗಿರುತ್ತಾರೆ ಅವರ ಮಧ್ಯೆ ಗುಂಪು ಕಟ್ಟಿ ಎತ್ತಿಕಟ್ಟಿ ಒಡೆದಾಳುವ ನೀತಿ ಅನುಸರಿಸುತ್ತಾರೆ. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ದೇಶ ಆಳುವ ವ್ಯಕ್ತಿಗೆ ನಮ್ಮ ಸೈನಿಕರಿಗೆ ತೊಂದರೆ ಇದೆ ಎಂದು ಅವರ ಸರಕಾರಕ್ಕೆ ಹೇಳಲು ಸಾಧ್ಯವಿಲ್ಲ ಎನ್ನುವುದಾದರೆ ಹೇಗೆ?. ಬಲಿದಾನವಾಗಿದ್ದು ಸೈನಿಕರು, ಅಧಿಕಾರ ಬಂದಿದ್ದು ಮೋದಿಗೆ. ಈ ಬಗ್ಗೆ ಜನತೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಾಯಾವತಿ ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಮಾಯಾವತಿ ಅವರ ಹೆಸರಿಲ್ಲದಂತೆ ಮಾಡಿಬಿಟ್ಟರು. ಇನ್ನು ಕರ್ನಾಟಕದಲ್ಲಿ ಕುಮಾರಣ್ಣ ಯಾವ ಲೆಕ್ಕ. ನಮ್ಮನ್ನು ನೋಡಿದ ತಕ್ಷಣ ಕುಮಾರಣ್ಣ ಬಿಜೆಪಿಯವರನ್ನು ತಬ್ಬಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ನಾವು ಜಾತ್ಯಾತೀತ, ಜಾತ್ಯಾತೀತ ಎಂದು ಹೇಳುತ್ತಿದ್ದ ಜನತಾದಳ ಮತ್ತು ದೇವೇಗೌಡರು ಇಳಿವಯಸ್ಸಿನಲ್ಲಿ ಅದು ಸಾಯುವ ಕಾಲದಲ್ಲಿ ಕುಮಾರಣ್ಣ ದೇವೇಗೌಡರನ್ನು ಕೋಮುವಾದಿ ಮಾಡಿಬಿಟ್ಟರು ಎಂದು ಛೇಡಿಸಿದರು.

ಈಗಲೇ ಜೆಡಿಎಸ್ ಪಕ್ಷದವರು ಎಚ್ಚೆತ್ತುಕೊಳ್ಳದಿದ್ದರೆ ಅವರ ಅಸ್ಥಿತ್ವವನ್ನು ಸಂಪೂರ್ಣ ಮುಗಿಸುವ ಕೀರ್ತಿ ಬಿಜೆಪಿಯವರಿಗೆ ಸಲ್ಲುತ್ತದೆ. ಮಾಯಾವತಿ ಮುಂದಿನ ಪ್ರಧಾನಿ ಎಂಬಂತೆ ಹೊರಹೊಮ್ಮಿದ್ದ ಅವರನ್ನೆ ಉತ್ತರ ಪ್ರದೇಶದಲ್ಲಿ ಹೆಸರಿಲ್ಲದಂತೆ ಬಿಜೆಪಿ ಮಅಡಿದೆ. ಇನ್ನೂ ಕರ್ನಾಟಕದ ಕುಮಾರಣ್ಣ ಯಾವ ಲೆಕ್ಕ. ಉತ್ತರ ಪ್ರದೇಶದ ಬಿಎಸ್‍ಪಿ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯವರು ಮಾಡದಿದ್ದರೆ ನಾನು ನನ್ನ ಹೆಸರನ್ನು ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

Ads on article

Advertise in articles 1

advertising articles 2

Advertise under the article