ಬೂಸಾ ಚಳುವಳಿ ದಲಿತ ಸಂಘಟನೆಯ ತಾಯಿಬೇರು:ರಮೇಶ್ ಕಾಂಚನ್

ಬೂಸಾ ಚಳುವಳಿ ದಲಿತ ಸಂಘಟನೆಯ ತಾಯಿಬೇರು:ರಮೇಶ್ ಕಾಂಚನ್


ಮಲ್ಪೆ: ತಮ್ಮ ವೈಚಾರಿಕತೆ, ಸಂಪ್ರದಾಯಿಕ ವಿರೋಧಿ ಮನೋಭಾವ, ಆಧುನಿಕ ದೃಷ್ಟಿಕೋನದ ಬಿ.ಬಸವಲಿಂಗಪ್ಪನವರ ಬೂಸಾ ಪ್ರಕರಣ ರಾಜ್ಯದಲ್ಲಿ ದಲಿತರು ಸಂಘಟಿತರಾಗಳು ತಾಯಿಬೇರು ಎಂದು ಉಡುಪಿ ಬ್ಲಾಕ್ ಕಾಂಗ್ರೇಸಿನ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಅವರು ಇಂದು ಆದಿಉಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿರುವ ಬೂಸಾ ಚಳುವಳಿ ಅರ್ಧ ಶತಮಾನ ಸಮಾವೇಶದ ಕರಪತ್ರ ಬಿಡುಗಡೆಮಾಡಿ ಮಾತನಾಡುತ್ತಾ, ಎಪ್ಪತ್ತರ ದಶಕದಲ್ಲಿ ಇಡೀ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬೂಸಾ ಚಳುವಳಿಯಿಂದಲೇ ದಲಿತ ಲೇಖಕ ಕಲಾವಿದರ ಒಕ್ಕೂಟದಿಂದ ದಲಿತ ಸಂಘರ್ಷ ಸಮಿತಿಯಾಗಿ ಕನ್ನಡ ನಾಡಿನ ಬಡವರಲ್ಲಿ ಚಳುವಳಿಯ ಸ್ಪೂರ್ತಿ ತುಂಬಿ ತಮ್ಮ ಹಕ್ಕುಗಳಿಗೆ ಹೋರಾಟದ ಸ್ವರೂಪ ನೀಡಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ದಸಂಸ ರಾಜ್ಯ ಸಮಿತಿ ಸದಸ್ಯ ಮತ್ತು ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ದಲಿತರಲ್ಲಿ ಆತ್ಮಾಭಿಮಾನದ ಸಂಕೇತವಾಗಿದ್ದ ಬಿ.ಬಸವಲಿಂಗಪ್ಪನವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಾ,ಕಾಲೇಜು ವಿದ್ಯಾರ್ಥಿಗಳು ಓದುವ ಸಾಹಿತ್ಯ ಬೂಸಾ ದನಗಳ ಮೇವು ಇದ್ದಂತೆ ಎಂದು ಮಾತನಾಡಿದರೆಂಬ ಆಧಾರದ ಮೇಲೆ ರಾಜೀನಾಮೆ ಕೊಡುವಂತಾಯಿತು. ಅವರ ಭಾಷಣದ ವಿರುದ್ಧ ಪಟ್ಟಭದ್ರ ಹಿತಾಶಕ್ತಿ ಜನ ಕರ್ನಾಟಕದಾದ್ಯಂತ ವ್ಯವಸ್ಥಿತ ಚಳುವಳಿಯನ್ನು ಮಾಡಿದರು.ಇದರಿಂದಾಗಿ ರಾಜ್ಯದಲ್ಲಿ ದಲಿತರು ಜಾಗೃತರಾದರು ಎಂದು ಜಯನ್ ತಿಳಿಸಿದರು.

ಮುಖ್ಯ ಅತಿಥಿಗಳಾದ ಪ್ರಗತಿಪರ ಚಿಂತಕ ಸAಜೀವ ಬಳ್ಕೂರು ಮಾತನಾಡಿ ನವೆಂಬರ್ ೨೬ ರಂದು ಬೆಂಗಳೂರಿನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಬೂಸಾ ಚಳುವಳಿ ಅರ್ಧ ಶತಮಾನದ ಹಿನ್ನಲೆಯಲ್ಲಿ ಜನಸಾಹಿತ್ಯ ಜನಚಳುವಳಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮತ್ತು ಹಿರಿಯ ದಲಿತ ಮುಖಂಡ ವಿಠಲ ಬಿಎಸ್‌ಎನ್‌ಎಲ್ ಕೊಡಂಕೂರು ಉಪಸ್ಥಿತರಿದ್ದರು.

ದಲಿತ ನಾಯಕರಾದ ಗಣೇಶ್ ನೆರ್ಗಿ, ಸಂತೋಷ್ ಕಪ್ಪೆಟ್ಟು, ದಯಾಕರ್ ಮಲ್ಪೆ, ರವಿರಾಜ್ ಲಕ್ಷ್ಮೀನಗರ, ಕೃಷ್ಣ ಶ್ರೀಯಾನ್ ಮಲ್ಪೆ, ವಿನಯ ಕೊಡಂಕೂರು, ಮುಗ್ಗೇಶ್, ದೀಪಕ್ ಕೊಡವೂರು, ವಸಂತ ಅಂಬಲಪಾಡಿ, ಮಲ್ಲೇಶ್, ನವೀನ್ ಬನ್ನಂಜೆ, ಸುಶೀಲ್ ಕುಮಾರ್ ಕೊಡವೂರು, ಸುರೇಶ್ ಚಿಟ್ಪಾಡಿ, ಚೌಡೇಶ್, ಅರುಣ್ ಸಲ್ಯಾನ್, ಸುಪುತ್ರ, ದೀಪಕ್ ಮಲ್ಪೆ, ಅನಿಲ್ ಕದಿಕೆ ಭಾಗವಹಿಸಿದ್ದರು. ಭಗವನ್ ಮಲ್ಪೆ ಸ್ವಾಗತಿಸಿ, ಪ್ರಸಾದ್ ನೆರ್ಗಿ ವಂದಿಸಿದರು.

Ads on article

Advertise in articles 1

advertising articles 2

Advertise under the article