ನವೆಂಬರ್ 26ರಂದು ದುಬೈ ಕರ್ನಾಟಕ ಸಂಘದಿಂದ ಬಾಲಕೃಷ್ಣ ಸಾಲಿಯಾನರಿಗೆ "ದುಬೈ ಕರ್ನಾಟಕ ರಾಜ್ಯೊತ್ಸವ -2023 ಪ್ರಶಸ್ತಿ" ಪ್ರದಾನ
ದುಬೈ :1985ರಲ್ಲಿ ಸ್ಥಾಪಿತವಾದ ಕರ್ನಾಟಕ ಸಂಘ ದುಬೈ, ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದುಬೈನಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಪ್ರತೀ ವರ್ಷವೂ ವಿಜೃಂಭಣೆಯಿಂದ ಆಚರಿಸುವ " ಕರ್ನಾಟಕ ರಾಜ್ಯೋತ್ಸವ" ದ ಅಂಗವಾಗಿ ನೀಡುವ ಪ್ರತಿಷ್ಟಿತ "ದುಬೈ ಕರ್ನಾಟಕ ರಾಜ್ಯೊತ್ಸವ -2023 ಪ್ರಶಸ್ತಿ" ಗೆ ಈ ಬಾರಿ ಬಾಲಕೃಷ್ಣ ಸಾಲಿಯಾನ್ ಅವರು ಆಯ್ಕೆಗೊಂಡಿದ್ದಾರೆ.
26ನೇ ನವೆಂಬರ್ 2023 ರಂದು ನಡೆಯಲಿರುವ 68ನೇ ಕರ್ನಾಟಕ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಸಾಲಿಯಾನ್ ರವರನ್ನು ಪುರಸ್ಕರಿಸಲಾಗುವುದು ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮತ್ತು ಕಾರ್ಯಕಾರಿ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯು.ಎ.ಇ ಸರ್ವ ಕನ್ನಡಿಗರ ಪರವಾಗಿ ಅಭಿನಂದನೆಗಳ ಮಹಾಪೋರವೆ ಹರಿದು ಬರುತ್ತಿದ್ದು, ಸಾಲಿಯಾನ್ ಅವರ ನಿಸ್ವಾಥ ಸೇವೆಗೆ ತಕ್ಕ ಪ್ರಶಸ್ತಿ ದೊರೆಯುತ್ತಿದ್ದು ಈ ಪುರಸ್ಕಾರವು ಇನ್ನೂ ಅನೇಕರನ್ನು ಸಮಾಜ ಸೇವೆಯತ್ತ ಪ್ರೇರೆಪಿಸುತ್ತದೆ ಎಂದು ಸಂಘದ ಪೋಷಕರು ಮತ್ತು ಸಲಹೆಗಾರರು ಅಭಿನಂದನೆ ಸಲ್ಲಿಸಿದ್ದಾರೆ.