ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಪ್ರಯಾಣಿಕರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿದ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನ ಸಿಬ್ಬಂದಿಗಳು! ವೀಡಿಯೊ ವೈರಲ್ ...
ಮಂಗಳೂರು: ಸೌದಿ ಅರೇಬಿಯಾದ ಹಿದಾಯ ಫೌಂಡೇಶನ್ ಜುಬೇಲ್ ಘಟಕದ ವತಿಯಂದ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಭಾಗವಹಿಸಲು ಪ್ರಯಾಣಿಸುತ್ತಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರನ್ನು ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಸಿಬ್ಬಂದಿಗಳು ಪ್ರಯಾಣಿಕರ ಸಮ್ಮುಖದಲ್ಲಿ ಅಭಿನಂದಿದ್ದಾರೆ.
ಮಂಗಳೂರಿನಿಂದ ಸೌದಿ ಅರೇಬಿಯಾದ ದಮ್ಮಾಂಗೆ ಇತರ ಗಣ್ಯರೊಂದಿಗೆ ಹಾಜಬ್ಬ ಅವರು ಪ್ರಯಾಣಿಸುತ್ತಿದ್ದರು. ಹರೇಕಳ ಹಾಜಬ್ಬರನ್ನು ಗುರುತಿಸಿದ ಏರ್ ಇಂಡಿಯ ಎಕ್ಸ್ ಪ್ರೆಸ್ ನ ಸಿಬ್ಬಂದಿಗಳು ಕ್ಯಾಪ್ಟನ್ ನ ಗಮನಕ್ಕೆ ತಂದರು. ಆಗ ಕ್ಯಾಪ್ಟನ್, ವಿಮಾನದಲ್ಲಿರುವ ಪ್ರಯಾಣಿಕರಿಗೆ ಹಾಜಬ್ಬರನ್ನು ಪರಿಚಯಿಸುತ್ತಾ *"ಶಿಕ್ಷಣ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿ ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬರು ನಮ್ಮ ವಿಮಾನ ದಲ್ಲಿ ಪ್ರಯಾಣಿಸುತ್ತಿರುವುದು ನಮಗೆಲ್ಲ ತುಂಬಾ ಸಂತೋಷ ತಂದಿದೆ. ಅವರಿಗೆ ಹೃದಯ ತುಂಬಿದ ಅಭಿನಂದನೆಗಳು" ಎಂದರು.
ಶಿಕ್ಷಣ ಚಿಂತಕ, ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟರ್ ಮಂಗಳೂರು ಹಾಗೂ ಉದ್ಯಮಿ ಫಾರೂಕ್ ಕನ್ಯಾನ ಪೋರ್ಟ್ ವೇ ಹಾಜಬ್ಬರ ಜೊತೆಗಿದ್ದರು.