ಸಾಲಿಗ್ರಾಮದಲ್ಲಿ ತಂದೆಯ ಜೊತೆ ಸೇರಿ ಬೃಹತ್ ಗಾತ್ರದ ಹೆಬ್ಬಾವು ಹಿಡಿದ ಮಗ! ವೀಡಿಯೊ ಭಾರೀ ವೈರಲ್
Wednesday, November 22, 2023
ಉಡುಪಿ: 7ನೇ ತರಗತಿಯ ಬಾಲಕನೋರ್ವ ತಂದೆಯ ನೆರವಿನೊಂದಿಗೆ ಬೃಹತ್ ಗಾತ್ರದ ಹೆಬ್ಬಾವು ಹಿಡಿದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ದೇವಾಡಿಗರಬೆಟ್ಟು ಗ್ರಾಮದಲ್ಲಿ ನಡೆದಿದೆ.
ಬಾಲಕನ ಸಾಹಸದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖ್ಯಾತ ಉರಗತಜ್ಞ ಸುಧೀಂದ್ರ ಐತಾಳ್ ಅವರ ಮಗ ಧೀರಜ್ ತಂದೆಯ ಜೊತೆ ಸೇರಿ ಹೆಬ್ಬಾವನ್ನು ಹಿಡಿದಿದ್ದಾನೆ. ಈತ ಏಳನೇ ತರಗತಿ ಕಲಿಯುತ್ತಿದ್ದಾನೆ. ಈಗಲೇ ತಂದೆಯ ಜೊತೆ ಸೇರಿ ಹಾವು ಹಿಡಿಯಲು ಮುಂದಾಗಿದ್ದು, ತಂದೆಯ ಹಾವು ಹಿಡಿಯುವ ಸಾಹಸ ಕಂಡು ಮಗನು ಹಾವು ಹಿಡಿಯಲು ಕೈಜೋಡಿಸಿದ್ದಾನೆ. ಸಾಹಸದ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.