ಲೋಕಸಭೆ ಚುನಾವಣೆ: ಅಣ್ಣಾಮಲೈ, ತಮಿಳಿಸೈ ಸೇರಿದಂತೆ ತಮಿಳುನಾಡಿನ 9 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ
Thursday, March 21, 2024
ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಗೆ ತಮಿಳುನಾಡಿನ 9 ಮಂದಿ ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡ ಮೂರನೇ ಪಟ್ಟಿಯನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ.
ಇತ್ತೀಚೆಗೆ ತೆಲಂಗಾಣ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದ ತಮಿಳಿಸೈ ಸೌಂದರರಾಜನ್ ಅವರನ್ನು ಚೆನ್ನೈ ದಕ್ಷಿಣದಿಂದ ಹಾಗು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಕೊಯಮತ್ತೂರಿನಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯಲಿದ್ದಾರೆ.
ಚೆನ್ನೈ ಸೆಂಟ್ರಲ್‌ನಿಂದ ವಿನೋಜ್ ಪಿ ಸೆಲ್ವಂ, ವೆಲ್ಲೂರಿನಿಂದ ಡಾ. ಎ ಸಿ ಷಣ್ಮುಗಂ, ಕೃಷ್ಣಗಿರಿಯಿಂದ ಸಿ. ನರಸಿಂಹನ್, ನೀಲಗಿರಿಯಿಂದ ಡಾ. ಎಲ್ ಮುರುಗನ್(ಎಸ್‌ಸಿ), ಪೆರಂಬಲೂರಿನಿಂದ ಟಿ ಆರ್ ಪರಿವೇಂದರ್, ತೂತುಕುಡಿಯಿಂದ ನೈನಾರ್ ನಾಗೇಂದ್ರನ್ ಮತ್ತು ಕನ್ಯಾಯಾಕುಮಾರಿಯಿಂದ ರಾಧಾಕೃಷ್ಣನ್ ಅವರನ್ನು ಕೇಸರಿ ಪಕ್ಷ ಕಣಕ್ಕಿಳಿಸಿದೆ.