ಕೋಟ ಶ್ರೀನಿವಾಸ ಪೂಜಾರಿಯನ್ನು ಗೆಲ್ಲಿಸಿ ಮೋದಿಯನ್ನು ಮತ್ತೆ ವಿಶ್ವನಾಯಕನನ್ನಾಗಿ ಮಾಡಿ:  ಶಾಸಕ ಗುರ್ಮೆ ಸುರೇಶ್ ಶೆಟ್ಟಿ: ಅಲೆವೂರು - ಕೊರಂಗ್ರಪಾಡಿ, ಮರ್ಣೆ - ಮಣಿಪುರ ಶಕ್ತಿ ಕೇಂದ್ರ ಸಭೆ

ಕೋಟ ಶ್ರೀನಿವಾಸ ಪೂಜಾರಿಯನ್ನು ಗೆಲ್ಲಿಸಿ ಮೋದಿಯನ್ನು ಮತ್ತೆ ವಿಶ್ವನಾಯಕನನ್ನಾಗಿ ಮಾಡಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ: ಅಲೆವೂರು - ಕೊರಂಗ್ರಪಾಡಿ, ಮರ್ಣೆ - ಮಣಿಪುರ ಶಕ್ತಿ ಕೇಂದ್ರ ಸಭೆ

ಅಲೆವೂರು - ಕೊರಂಗ್ರಪಾಡಿ ಶಕ್ತಿ ಕೇಂದ್ರದ ಸಭೆ ಇಂದು ದಿನಾಂಕ 31-03-2024 ರಂದು ಅಶೋಕ್ ಶೆಟ್ಟಿಗಾರ್ ಅವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಅವರು ಭಾಗವಹಿಸಿದರು.

ಶಾಸಕರು ಮಾತನಾಡಿ ದೇಶದಲ್ಲಿ ಕೋರೋನಾ ವೈರಸ್ ಎಂಬ ಮಹಾಮಾರಿ ಪ್ರಪಂಚದಲ್ಲಿ ಹಬ್ಬಿದ ಸಂದರ್ಭದಲ್ಲಿ ದೇಶದಲ್ಲಿ ಅದನ್ನು ನಿಯಂತ್ರಿಸಿದ ರೀತಿ ಹಾಗೂ ಸ್ವದೇಶಿ ಕೋರೋನಾ ಲಸಿಕೆಯನ್ನು ಕಂಡುಹಿಡಿದ ಕೀರ್ತಿ ಭಾರತಕ್ಕಿದೆ ಜೊತೆಗೆ ಕೋರೋನಾ ಲಸಿಕೆಯನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದುದರಿಂದ ಹಾಗಾಗಿ ಇಂತಹ ಸಮರ್ಥ ನಾಯಕನ್ನು ಮಗದೊಮ್ಮೆ ಪ್ರಧಾನ ಮಂತ್ರಿರನ್ನಾಗಿಸಲು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದರು.


ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಕಾರ್ಯದರ್ಶಿಗಳಾದ ರಾಜೇಶ್ ಕುಂದರ್, ಉದ್ಯಾವರ ಮಹಾಶಕ್ತಿ ಕೇಂದ್ರದ ಅಶೋಕ್ ಕುಮಾರ್, ಅಲೆವೂರು ಶಕ್ತಿ ಕೇಂದ್ರದ ಸಂಚಾಲಕರಾದ ಶೇಖರ್ ಆಚಾರ್ಯ, ಸಹ ಸಂಚಾಲಕರಾದ ಸಂತೋಷ್ ಶಣೈ, ಕೊರಂಗ್ರಪಾಡಿ ಶಕ್ತಿ ಕೇಂದ್ರದ ಸಂಚಾಲಕರಾದ ಆಶಿಶ್ ಶೆಟ್ಟಿ, ಸಹ ಸಂಚಾಲಕರಾದ ಪ್ರೇಮಾ, ಅಲೆವೂರು ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮರ್ಣೆ - ಮಣಿಪುರ ಶಕ್ತಿ ಕೇಂದ್ರ ಸಭೆ - ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ಮರ್ಣೆ - ಮಣಿಪುರ ಶಕ್ತಿ ಕೇಂದ್ರದ ಸಭೆ ಇಂದು ದಿನಾಂಕ 31-03-2024 ರಂದು ದೆಂದೂರುಕಟ್ಟೆ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಅವರು ಭಾಗವಹಿಸಿದರು.



ಶಾಸಕರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ವಿದೇಶಿ ಗಣ್ಯರು ಅವರನ್ನು ವಿಶ್ವ ನಾಯಕ ಎಂದು ಕರೆಯುತ್ತಿದ್ದಾರೆ. ಇಂತಹ ಸಮರ್ಥ ನಾಯಕ ಮಗದೊಮ್ಮೆ ಪ್ರಧಾನ ಮಂತ್ರಿರನ್ನಾಗಿಸಲು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸರಳ ಸಜ್ಜನಿಕೇಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, 80 ಬಡಗಬೆಟ್ಟು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಪದ್ಮನಾಭ ನಾಯಕ್, ಮರ್ಣೆ ಶಕ್ತಿ ಕೇಂದ್ರದ ಸಂಚಾಲಕರಾದ ಪ್ರಜ್ವಲ್ ಹೆಗ್ಡೆ, ಸಹ ಸಂಚಾಲಕರಾದ ಗಣಪತಿ ನಾಯಕ್, ಮಣಿಪುರ ಶಕ್ತಿ ಕೇಂದ್ರದ ಸಂಚಾಲಕರಾದ ರಾಜೇಶ್ ಪುತ್ರನ್, ಸಹ ಸಂಚಾಲಕರಾದ ನಾಗೇಶ್ ಶೆಟ್ಟಿ, ಮಣಿಪುರ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article