ತನ್ನ ವೀರ್ಯವನ್ನು ಐಸ್ ಕ್ರೀಂಗೆ ಮಿಶ್ರಣ ಮಾಡಿ ಮಾರಾಟ ಮಾಡಿದ ಮಾರಾಟಗಾರ; ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರೋಪಿ ಬಂಧನ
ಹೈದರಾಬಾದ್: ಹೈದರಾಬಾದ್ನಲ್ಲಿ ಐಸ್ ಕ್ರೀಂ ಮಾರಾಟಗಾರನೊಬ್ಬ ಹಸ್ತಮೈಥುನ ಮಾಡಿ ವೀರ್ಯವನ್ನು ಐಸ್ ಕ್ರೀಂಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಒಂದು ವಿಡಿಯೋ ಕೂಡ ವೈರಲ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಾ.19ರಂದು ಘಟನೆಯ ವಿಡಿಯೋ ವೈರಲ್ ಆಗಿದ್ದು, ಅರೋಪಿಯನ್ನು ರಾಜಸ್ಥಾನದ ಕಲುರಾಮ್ ಕುರ್ಬಿಯಾ ಎಂದು ಗುರುತಿಸಲಾಗಿದೆ. ಐಸ್ ಕ್ರೀಮ್ಗೆ ವೀರ್ಯವನ್ನು ಬೆರೆಸುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಐಸ್ ಕ್ರೀಮ್ಗೆ ಕಲಬೆರಕೆ ಉತ್ಪನ್ನಗಳನ್ನು ಬೆರೆಸುತ್ತಿರುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ ಎಂದು ಹೇಳಿದ್ದಾರೆ. ಹೈದರಾಬಾದಿನ ವಾರಂಗಲ್, ನೆಕ್ಕೊಂಡ ಪ್ರದೇಶದ ಅಂಬೇಡ್ಕರ್ನಗರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಆಹಾರ ಇಲಾಖೆ ನಿರೀಕ್ಷಕ ಕೃಷ್ಣ ಮೂರ್ತಿಯವರು ಈ ಐಸ್ ಕ್ರೀಮ್ ಮಾದರಿಯನ್ನು ಸಂಗ್ರಹ ಮಾಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಐಸ್ ಕ್ರೀಮ್ಗೆ ಕಲಬೆರೆಕೆ ಮಾಡುವ ಮಾರಾಟಗಾರರ ವಿರುದ್ಧ ಐಪಿಸಿ ಸೆಕ್ಷನ್ 294ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಆಹಾರ ಇಲಾಖೆ ನಿರೀಕ್ಷಕ ಕೃಷ್ಣ ಮೂರ್ತಿ ಹೇಳಿದ್ದಾರೆ.
ಈ ಐಸ್ ಕ್ರೀಮ್ ಗಾಡಿಯಲ್ಲಿ ಫ್ರೂಟ್ ಸಲಾಡ್ಗಳನ್ನು ಕೂಡ ಮಾರಾಟ ಮಾಡಲಾಗಿದೆ. ಅದನ್ನು ಮಾಲಿನ್ಯದ ಕಾರಣದಿಂದ ಅಲ್ಲಿಂದ ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಾಲಿನ್ಯವನ್ನು ಕಾಪಾಡಲು ಹಾಗೂ ಆರೋಗ್ಯಯುತವಾದ ಆಹಾರಗಳನ್ನು ನೀಡಲು ಬೀದಿ ಬದಿಯ ವ್ಯಾಪರಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.