ಒಕ್ಕಲಿಗರ ಸಂಘ ಯುಎಇ ವತಿಯಿಂದ ದುಬೈನಲ್ಲಿ ಅದ್ದೂರಿ ಮಹಿಳಾ ದಿನಾಚರಣೆ-2024
ದುಬೈ: ಒಕ್ಕಲಿಗರ ಸಂಘ ಯುಎಇ ವತಿಯಿಂದ ರವಿವಾರ ದುಬೈನ ಮಶ್ರೀಫ್ ಪಾರ್ಕ್ ನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸುಮಾರು 200 ಕ್ಕು ಹೆಚ್ಹು ಜನರೂ ಆಗಮಿಸಿ ತುಂಬಾ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು.
ಯುಎಇ ದೇಶದಲ್ಲಿದ್ದುಕೊಂಡು ತಮ್ಮ ಉದ್ಯೋಗದ ಜೊತೆಗೆ ಸಾಮಾಜಿಕ ಅರೋಗ್ಯ ಶಿಕ್ಷಣ ಮತ್ತು ಕನ್ನಡ ಕ್ಷೇತ್ರ ದಲ್ಲಿ ನಿರಂತರವಾಗಿ ತಮ್ಮ ಜೀವನವನ್ನೂ ತೊಡಗಿಸಿ ಕೊಂಡು ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಒಕ್ಕಲಿಗರ ಸಂಘ ಯುಎಇಯ ಮಹಿಳೆಯರಾದ ವಿಪುಲ ಶೆಟ್ಟಿ, ಡಾ.ಲೇಖಾ ತಮ್ಮಯ್ಯ, ರೂಪಾ ಶಶಿಧರ್ ಮತ್ತು ಪ್ರಭಾ ಪ್ರದೀಪ್ ರವರನ್ನು ಗುರುತಿಸಿ ಸಂಘ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಮಹಿಳಾ ದಿನಕ್ಕೆ ಆಗಮಿಸಿದ ಎಲ್ಲಾ ಮಹಿಳೆಯರಿಗೂ ಗುಲಾಬಿ ಹೂವನ್ನು ಕೊಡುವ ಮುಖಾಂತರ ಸ್ವಾಗತಿಸಲಾಯಿತು ಮತ್ತು ಅದೇ ರೀತಿ ಎಲ್ಲಾ ಮಹಿಳೆಯರು ಮಕ್ಕಳು ಹಾಗು ಪುರುಷರು ಮನೋರಂಜನಾ ಕಾರ್ಯಕ್ರಮ ಮತ್ತು ಆಟೋಟಗಳೊಂದಿಗೆ ಭಾಗವಹಿಸಿ ತುಂಬಾ ಸಂತಸ ಪಟ್ಟರು.
ಆಟಗಳಲ್ಲಿ ಭಾಗವಹಿಸಿ ಜಯಗಳಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು ಮತ್ತು ಸಂಘದ ವತಿಯಿಂದ ಎಲ್ಲರಿಗೂ ನಮ್ಮ ಗೌಡರ ಶೈಲಿಯ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣರಾದ ಒಕ್ಕಲಿಗರ ಸಂಘದ ಬೋರ್ಡ್ ಆಫ್ ಡೈರೆಕ್ಟರ್ಸ್ ಗಳಾದ ಶ್ರೀಮತಿ ಶೋಭಾ ಗೌಡ, ಶ್ರೀಮತಿ ಕಾಂತ ಗೌಡ, ಶ್ರೀ ಪುಟ್ಟರಾಜು ಗೌಡ, ಶ್ರೀ ಯತೀಶ ಗೌಡ, ಶ್ರೀ ದೀಪಕ್ ಗೌಡ, ಶ್ರೀ ಗೋಕುಲ್ ಗೌಡ, ಶ್ರೀ ಸತೀಶ್ ಗೌಡ, ಶ್ರೀ ಪ್ರದೀಪ್ ಗೌಡ , ಶ್ರೀ, ರಮೇಶ್ ರಂಗಪ್ಪ, ಶ್ರೀ, ಮಹೇಶ್ ಗೌಡ, ಶ್ರೀ ಅಕ್ಷಯ್ ಗೌಡ, ಶ್ರೀ ಮೋಹನ್ ಗೌಡ, ಶ್ರೀ, ನಾರಾಯಣ ಸ್ವಾಮಿ, ಶ್ರೀ ಚೇತನ್ ಗೌಡ ಅವರನ್ನು ಸಂಘದ ಅಧ್ಯಕ್ಷರಾದ ಡಾ. ರಶ್ಮಿ ನಂದಕಿಶೋರ್ ಅವರು ವೇದಿಕೆ ಮೇಲೆ ಕರೆದು ಅಭಿನಂದಿಸಿದರು. ಜೊತೆಗೆ ಸಂಘಕ್ಕೆ ನಿಮ್ಮೆಲ್ಲರ ಸಹಕಾರ ಇದೇ ರೀತಿ ನೀಡಬೇಕೆಂದು ಕೇಳಿಕೊಂಡರು.